This is the title of the web page

ಆರು ವರ್ಷಗಳಾದರೂ ಮುಗಿಯದ ಬೆಳಗಾವಿ ಬಸ್ ನಿಲ್ದಾಣ ಕಾಮಗಾರಿ ವಿಳಂಬಕ್ಕೆ ಕಾರಣ ತಿಳಿಸಿದ ಶಾಸಕ ಬೆನಕೆ

ಬೆಳಗಾವಿ, ೧೧- ಆರು ವರ್ಷಗಳ ಹಿಂದೆ ಪ್ರಾರಂಭವಾದ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ಎರಡು ವರ್ಷಗಳಲ್ಲಿ ಮುಕ್ತಾಯವಾಗಬೇಕಿತ್ತು. ಇಷ್ಟು ವರ್ಷಗಳಾದರೂ ಇನ್ನೂ ಕಾಮಗಾರಿ ಪೂರ್ಣವಾಗದಿರುವದಕ್ಕೆ ಹಣಕಾಸಿನ ಕೊರತೆ ಮತ್ತು ಕೊರೋನಾ ಕಾರಣವಾಗಿದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯದ ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರು ‘ಅಭಿವೃದ್ಧಿ ಕೆಲಸಗಳಿಗೆ ಹಣಕಾಸಿನ ಕೊರತೆಯಿಲ್ಲ’ ಎಂದು ಹೇಳುತ್ತಿರುವಾಗ, ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಅವರು ಬೆಳಗಾವಿ ಬಸ್ ನಿಲ್ದಾಣ ನಿರ್ಮಾಣ ಕೆಲಸ ಹಣಕಾಸಿನ ಕೊರತೆಯ ಕಾರಣ ತಡವಾಗಿದೆ ಎಂದು ಹೇಳಿ ಸರಕಾರದ ಸುಳ್ಳನ್ನು ಬಹಿರಂಗ ಪಡಿಸಿದ್ದಾರೆ.

ಸೋಮವಾರ ಅಧಿಕಾರಿಗಳೊಂದಿಗೆ ಬೆಳಗಾವಿಯ ಹೊಸ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ ವೀಕ್ಷಿಸಿದ ಸಂದರ್ಭದಲ್ಲಿ ಅವರು ಇದನ್ನು ತಿಳಿಸಿದರು.

ಕೇಂದ್ರ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯು ನಿಧಾನವಾಗಿದೆ. ಅದಕ್ಕೆ ಹಲವಾರು ಕಾರಣಗಳು ಇದ್ದವು. ಈ ಕುರಿತು ಸದನದಲ್ಲಿ ನಾನು ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕೆ ಅವರು ಒಂದು ವರ್ಷದೊಳಗಾಗಿ ಕಾಮಗಾರಿಯನ್ನು ಪೂರ್ಣ ಮಾಡುವುದಾಗಿ ಹೇಳಿದ್ದರು. ಕಾಮಗಾರಿ ಹಣಕಾಸಿನ ಕೊರತೆ ಹಾಗೂ ಕೊರೊನಾ ಕಾರಣ ವಿಳಂಬವಾಗಿದೆ. ಅಧಿಕಾರಿಗಳು ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಮಾಡಿ ಹಸ್ತಾಂತರಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು.

You might also like
Leave a comment