This is the title of the web page

ಭಾರತ-ಚೀನಾ ನಡುವೆ ದಾಖಲೆಯ ವ್ಯಾಪಾರ

ಬೀಜಿಂಗ್, 14- ಭಾರತದ ಗಡಿಯೊಳಗೆ ನುಗ್ಗಿದ್ದ ಪಾಪಿ ಚೀನಾ ಭಾರತೀಯ ಸೈನಿಕರ ಕೊಲೆ ಮಾಡಿದ ನಂತರ ಉಭಯ ದೇಶಗಳ ನಡುವೆಯ ತ್ವೇಷದ ವಾತಾವರಣದ ಹೊರತಾಗಿಯೂ 2021ರಲ್ಲಿ ಚೀನಾ ಪ್ರಮುಖ ವ್ಯಾಪಾರ ಪಾಲುದಾರಿಕೆ ರಾಷ್ಟ್ರವಾಗಿ ಹೊರಹೊಮ್ಮಿದೆ.

ಉಭಯ ದೇಶಗಳ ನಡುವೆ ದಾಖಲೆಯ 125 ಶತಕೋಟಿ ಡಾಲರ್ ಗಿಂತ ಹೆಚ್ಚು ದ್ವಿಪಕ್ಷೀಯ ವ್ಯವಹಾರ ನಡೆದಿದೆ.

ಶುಕ್ರವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ 2021 ರಲ್ಲಿ ಚೀನಾ ಮತ್ತು ಭಾರತದ ನಡುವಿನ ಒಟ್ಟು ವ್ಯಾಪಾರ 125.66 ಶತಕೋಟಿ ಡಾಲರ್ ಗೆ ಹೆಚ್ಚಾಗಿದೆ. ಇದು 2020ಕ್ಕಿಂತ 43.3 ರಷ್ಟು ಹೆಚ್ಚಾಗಿದೆ ಎಂದು ಕಸ್ಟಮ್ಸ್ ಜನರಲ್ ಅಡ್ಮಿನಿಸ್ಟ್ರೇಷನ್‌ನ ಡೇಟಾವನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಜನವರಿಯಿಂದ ಡಿಸೆಂಬರ್‌ವರೆಗೆ ಭಾರತಕ್ಕೆ ಚೀನಾದ ರಫ್ತು ಶೇ. 46.2 ರಷ್ಟು ಏರಿಕೆಯಾಗಿ 97.52 ಶತಕೋಟಿ ಡಾಲರ್ ಗೆ ತಲುಪಿದೆ. ಆದರೆ ಚೀನಾಗೆ ಭಾರತದ ರಫ್ತು ಶೇ. 34.2 ರಷ್ಟು ಏರಿಕೆಯಾಗಿ 28.14 ಶತಕೋಟಿ ಡಾಲರ್‌ಗೆ ತಲುಪಿದೆ. ಇದರೊಂದಿಗೆ

ಭಾರತದ ವ್ಯಾಪಾರ ಕೊರತೆಯು 2021 ರಲ್ಲಿ 69.38 ಶತಕೋಟಿ ಡಾಲರ್ ಗೆ ಏರಿದೆ.  ಅಂದರೆ ಚೀನಾವು ಭಾರತಕ್ಕೆ ರಫ್ತು ಮಾಡುವುದೇ ಹೆಚ್ಚು, ವಿನಾ ಭಾರತದಿಂದ ಚೀನಾಕ್ಕೆ ರಫ್ತು ಮಾಡುವುದು ಬಹಳ ಕಡಿಮೆ.

You might also like
Leave a comment