This is the title of the web page

ಆರ್ ಟಿ ಪಿ ಸಿ ಆರ್ ಸರ್ಟಿಫಿಕೇಟ ಇಲ್ಲದೇ ಪ್ರವೇಶಕ್ಕೆ ನಿರಾಕರಣೆ

ಬೆಳಗಾವಿ, 1- ಕೋವಿಡ್ ಆರ್ ಟಿ ಪಿ ಆರ್ ಸರ್ಟಿಫಿಕೇಟ್ ಇಲ್ಲದೇ ಎರಡು ಖಾಸಗಿ ಪ್ರವಾಸಿ ಬಸ್ ಗಳ ಮೂಲಕ ಮಹಾರಾಷ್ಟ್ರದಿಂದ ಆಗಮಿಸಿದ್ದ 41 ಜನರಿಗೆ ರಾಜ್ಯ ಪ್ರವೇಶಿಸಲು ಅನುಮತಿ ನಿರಾಕರಿಸಿ ಬಸ್ ಗಳನ್ನು ಮರಳಿ ಕಳಿಸಲಾಗಿದೆ.

ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಶರ್ಮಾ ಹಾಗೂ ನ್ಯಾಷನಲ್ ಟ್ರಾವೆಲ್ಸ್ ಬಸ್ ಗಳನ್ನು ರಾಜ್ಯದ ನಿಪ್ಪಾಣಿ ಬಳಿಯ ಕೊಗನೊಳ್ಳಿ ಚೆಕ್‌ಪೋಸ್ಟ್ ನಲ್ಲಿ ಮಂಗಳವಾರ ಮುಂಜಾನೆ ತಡೆದು ತಪಾಸಣೆ ನಡೆಸಿದಾಗ 41 ಪ್ರಯಾಣಿಕರ ಕೋವಿಡ್ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದ್ದಕ್ಕೆ ಎರಡೂ ಬಸ್ ಗಳನ್ನು ವಾಪಸ್ ಕಳುಹಿಸಲಾಯಿತು.

ಶರ್ಮಾ ಟ್ರಾವೆಲ್ಸ್ ನಲ್ಲಿ ಒಟ್ಟು 28 ಜನರಲ್ಲಿ 24 ಹಾಗೂ ನ್ಯಾಷನಲ್ ಟ್ರಾವೆಲ್ ನಲ್ಲಿ 28 ಜನರಲ್ಲಿ 17 ಪ್ರಯಾಣಿಕರ ಬಳಿ ಆರ್ ಟಿ ನೆಗೆಟಿವ್ ವರದಿ ಇರಲಿಲ್ಲ. ಎರಡೂ ಬಸ್ ಗಳಲ್ಲಿ ಬರುತ್ತಿದ್ದ 41 ಪ್ರಯಾಣಿಕರನ್ನು ಪೊಲೀಸರು ಮುಂಬೈಗೆ ವಾಪಸ್ ಕಳುಹಿಸಿ, ಇತರ ಪ್ರಯಾಣಿಕರನ್ನು ಬೇರೆ ಬಸ್ ಗಳ ಮೂಲಕ ಬೆಂಗಳೂರಿಗೆ ಕಳುಹಿಸಲಾಗಿದೆ.

You might also like
Leave a comment