This is the title of the web page

ಬಂಧನದ ವರೆಗೆ ಶವ ಸಂಸ್ಕಾರ ನಡೆಸಲು ನಿರಾಕರಣೆ

ಬೆಳಗಾವಿ, 13- ಇಲ್ಲಿಯ ಹಿಂಡಲಗಾ ಗಣೇಶ ಮಂದಿರ ಹತ್ತಿರವಿರುವ ಅರ್ಗನ್‍ ತಾಲಾಬ್‍ನಲ್ಲಿ (ನೀರಿನ ಹೊಂಡ) ಕಳೆದ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ ಕ್ರಿಷಾ ಕೇಶ್ವಾನಿ ಹಾಗೂ ಅವರ ಇಬ್ಬರು ಪುಟ್ಟ ಮಕ್ಕಳ ಮೃತದೇಹಗಳನ್ನು ತೆಗೆದುಕೊಳ್ಳಲು ಅವರ ತವರು ಮನೆಯವರು ನಿರಾಕರಿಸಿ, ಅದು ಆತ್ಮಹತ್ಯೆಯಲ್ಲ ಕೊಲೆ. ಎಲ್ಲಿಯವರೆಗೆ ಕೊಲೆ ಆರೋಪಿಗಳಾದ ಕ್ರಿಷಾ ಪತಿಯ ಮನೆಯವರನ್ನು ಬಂಧಿಸುವದಿಲ್ಲವೋ ಅಲ್ಲಿಯವರೆಗೆ ಶವಗಳ ಸಂಸ್ಕಾರ ನಡೆಸುವುದಿಲ್ಲ ಎಂದು  ಹೇಳಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಕ್ರಿಷಾ ಸಂಬಂಧಿಕರು, ಆರೋಪಿಗಳ ಪರವಾಗಿ ತಮ್ಮ ಸ್ಥಳೀಯ ಸಿಂಧಿ ಸಮಾಜ ನಿಂತಿದೆ. ಸಿಂಧಿ ಪಂಚಾಯತ್‍ ಜನರಿಂದ ಪ್ರಕರಣ ವಾಪಸ್ ತೆಗೆದುಕೊಳ್ಳಬೇಕೆಂದು ಒತ್ತಡ ತರಲಾಗುತ್ತಿದೆ. ಒಂದು ವೇಳೆ ಕೇಸ್ ಹಿಂದಕ್ಕೆ ತೆಗೆದುಕೊಳ್ಳದಿದ್ದರೆ ಸತ್ತವಳ ವಿಡಿಯೋ ವೈರಲ್ ಮಾಡಿ ಹೆಸರು ಕೆಡಿಸುವ ಬೆದರಿಕೆ ಹಾಕಲಾಗುತ್ತಿದೆ. ಎಫ್ ಅಯ್ ಆರ್ ದಾಖಲಿಸಲು ಉದ್ಧೇಶಪೂರ್ವಕವಾಗಿ ತಡಮಾಡಿ ಆರೋಪಿಗಳು ಪರಾರಿಯಾಗಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

“ವೀಕಿ ಛತಾನಿ, ಮನೀಷ ಕೇಶವಾನಿ, ಆರತಿ ಕೇಶವಾನಿ, ಮೀನಾ ಕೇಶವಾನಿ, ಪೂಜಾ ಕರಾಡೆ ಅವರನ್ನು ಬಂಧಿಸಬೇಕು ಅಲ್ಲಿಯ ವರೆಗೂ ನಾವು ಮೃತದೇಹಗಳನ್ನು ಮುಟ್ಟುವುದಿಲ್ಲ,” ಎಂದು ಮೃತಳ ಸಹೋದರಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಸಹ್ಯಾದ್ರಿ ನಗರದ 36 ವರುಷದ ಎರಡು ಮಕ್ಕಳ ತಾಯಿ ಕ್ರಿಷಾ ಕೇಶ್ವಾನಿ ಅವರು ಕೌಟುಂಬಿಕ ಸಮಸ್ಯೆಗಳಿಗೆ ಮನನೊಂದು ಶುಕ್ರವಾರ ತನ್ನ ಇಬ್ಬರು ಮಕ್ಕಳಾದ ಭಾವಿರ (4), ವೀರೇನ್ (7), ಜೊತೆಗೆ ಅರಗನ್‍ ತಾಲಾಬ್‍ಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದರು.

ಎಸ್‍ಡಿಆರ್‍ಎಫ್ ಹಾಗು ಎಪಿಎಂಸಿ ಪೊಲೀಸ್‍ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ  ಮೂರು ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು ಆದರೇ ಮೃತರ ಸಂಬಂಧಿ ಅಭಿಜೀತ ಎಂಬವರು ಆರೋಪಿಗಳು ಪರಾರಿಯಾಗಲು ಸಹಾಯ ಮಾಡಿದ್ದಾರೆ. ಎಫ್‍ಐಆರ್ ನೀಡಲೂ ಕೂಡ ತಡ ಮಾಡಲಾಗಿದೆ. ಆರೋಪಿಗಳನ್ನ ಬಂಧಿಸಬೇಕು, ಉದ್ಧೇಶಪೂರ್ವಕವಾಗಿ ಎಫ್ ಅಯ್ ಆರ್ ದಾಖಲಿಸಲು ತಡ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತ ಮಹಿಳೆಯ ಸಹೋದರಿ ಒತ್ತಾಯಿಸಿದರು.

You might also like
Leave a comment