This is the title of the web page

ಟಿಪ್ಪು ಸುಲ್ತಾನ ಅಟೋ ನಿಲ್ದಾಣ ಮತ್ತು ಬೀದಿ ಬದಿಯ ವ್ಯಾಪಾರ ತೆರವಿಗೆ ಶಾಸಕ ಬೆನಕೆ ಸೂಚನೆ

ಬೆಳಗಾವಿ, ೧೧- ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ “ಟಿಪ್ಪು ಸುಲ್ತಾನ ಅಟೋ ರಿಕ್ಷಾ ನಿಲ್ದಾಣ” ಮತ್ತು ಬೀದಿ ಬದಿಯ ವ್ಯಾಪಾರಿಗಳನ್ನು ತೆರವು ಮಾಡಬೇಕೆಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಂತೆ ಕೇಂದ್ರ ಬಸ್ ನಿಲ್ದಾಣ, ಮಾರುಕಟ್ಟೆ ರಸ್ತೆಗಳಲ್ಲಿ ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ ನಾಗರಿಕರಿಗೆ ಬೀದಿಬದಿ ವ್ಯಾಪಾರಸ್ಥರಿಂದ ತೊಂದರೆಯಾಗದಂತೆ ಅವರನ್ನು ಕಡ್ಡಾಯವಾಗಿ ತೆರವು ಮಾಡುವಂತೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಅವರು ದಂಡು ಮಂಡಳಿ (ಕ್ಯಾಟೋನ್ಮೆಂಟ್) ಹಾಗೂ ಮಹಾನಗರ ಪಾಲಿಕೆಗೆ ಆದ್ದೇಶಿಸಿದ್ದಾರೆ.

ಸೋಮವಾರ ಈ ಎರಡೂ ಕ್ಷೇತ್ರಗಳ ಅಧಿಕಾರಿಗಳೊಂದಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಕಾಮಗಾರಿ ವೀಕ್ಷಿಸಿದ ಅವರು,
ಕೇಂದ್ರ ಬಸ್ ನಿಲ್ದಾಣದ ಪಕ್ಕದ ರಸ್ತೆ ಬದಿಯ ವ್ಯಾಪಾರಿಗಳಿಂದ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ಅವರನ್ನೆಲ್ಲ ಖಾಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಅದರಂತೆ ಕೂಡಲೇ “ಟಿಪ್ಪು ಸುಲ್ತಾನ್ ಆಟೋ ರಿಕ್ಷಾ ನಿಲ್ದಾಣ” ವನ್ನು ತೆಗೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

You might also like
Leave a comment