ಬೆಳಗಾವಿ, ಜುಲೈ 30: ವ್ಯಾಪಕ ಮಳೆಯ ಕಾರಣ ಹಾಳಾಗಿ ತೆಗ್ಗು-ಗುಂಡಿ ಬಿದ್ದಿರುವ ರಾಮತೀರ್ಥ ನಗರ ಹರ್ಷಾ ಹೊಟೇಲ್ ಎದುರಿಗಿನ ವೃತ್ತದ ರಸ್ತೆಯಲ್ಲಿ ಮಂಗಳವಾರ ಪೇವರ್ಸ ಹಾಕಿ ದುರಸ್ತಿ ಕಾರ್ಯ ನಡೆಸಲಾಗುತ್ತಿದ್ದು ಇಲ್ಲಿಯ ನಗರ ಸೇವಕ ಹಣಮಂತ ಕೊಂಗಾಲಿ ಅವರು ಫೀಲ್ಡಿಗಿಳಿದು ಪರಿಶೀಲನೆ ನಡೆಸಿದರು.
ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ನಗರ ಸೇವಕರ ಕೊಂಗಾಲಿ ಅವರ ಕಾರ್ಯವನ್ನು ರಾಮತೀರ್ಥ ನಗರ ನಿವಾಸಿಗಳು ಶ್ಲಾಘಿಸಿದ್ದಾರೆ.