This is the title of the web page

ರಾಜ್ಯದ ಬೆಳೆವಣಿಗೆಗಳು ಸರ್ಕಾರಕ್ಕೆ ಗೌರವ ತರುವುದಿಲ್ಲ ; ತನ್ನ ಸರ್ಕಾರದ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ ಸಚಿವ

ನಿಪ್ಪಾಣಿ, ೧೦- ಕರ್ನಾಟಕದಲ್ಲಿ ಧರ್ಮಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಗೌರವ ತರುವುದಿಲ್ಲ ಎಂದು ಹೇಳುವ ಮೂಲಕ ತಮ್ಮದೇ ಸರ್ಕಾರದ ವಿರುದ್ಧ ಕಾನೂನು, ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆ  ನಿಪ್ಪಾಣಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಮಾತನಾಡಿದ ಮಾಧುಸ್ವಾಮಿ ಅವರು, ಯಾರಿಗಾದರೂ ತೊಂದರೆ ಕೊಡುವುದು ಮತ್ತು ಶಾಂತಿ ಕದಡುವುದನ್ನು ಯಾರೇ ಮಾಡಿದರೂ ಗೌರವದ ವಿಷಯವಲ್ಲ. ಅದರಲ್ಲೂ ಆಡಳಿತ ಪಕ್ಷಕ್ಕಂತೂ ಗೌರವ ಬರುವುದಿಲ್ಲ ಎಂದರು.

ಆಡಳಿತ ಮಾಡಬೇಕಾದರೆ ಇಲ್ಲಿ ವಾಸಿಸುವ ಎಲ್ಲರೂ ಈ ದೇಶದ ಪ್ರಜೆಗಳೇ ಎಂದು ಭಾವಿಸಬೇಕು. ಆಕಸ್ಮಿಕವಾಗಿ ನಡೆಯುವದು ಬೇರೆ. ಆದರೆ ಬೇಕೆಂದೇ  ಮಾಡುವುದನ್ನು ಯಾರೂ ಒಪ್ಪಿಕೊಳ್ಳಲು ಆಗುವುದಿಲ್ಲ ಎಂದರು.

ಚಂದ್ರು ಹತ್ಯೆ ಪ್ರಕರಣದ ಮಾಹಿತಿಯನ್ನು ಗೃಹ ಮಂತ್ರಿಗಳಿಗೆ ಸರಿಯಾಗಿ ನೀಡಿಲ್ಲ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಕ್ಷಣ ಪ್ರತಿಕ್ರಿಯೆ ಮಾಡಿದ್ದು ಗೊಂದಲಕ್ಕೆ ಕಾರಣವಾಗಿದೆ. ಅಧಿಕಾರದಲ್ಲಿರುವವರು ಸಮಾಧಾನವಾಗಿ ವರ್ತಿಸಬೇಕು ಮತ್ತು ಎಲ್ಲರೂ ಸಮಾನತೆಯಿಂದ ಬದುಕಬೇಕು ಎಂದರು.

ಶಾಂತಿ ಇರುವಲ್ಲಿ ಮಾತ್ರ ಅಭಿವೃದ್ಧಿ ಇರುತ್ತದೆ. ಶಾಂತಿ ಕದಡಿದರೇ ಯಾರೇ ಇರಲಿ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಇದೇ ವೇಳೆ ಸಚಿವ ಮಾಧುಸ್ವಾಮಿ ಎಚ್ಚರಿಸಿದರು.

You might also like
Leave a comment