This is the title of the web page

ನಿವೃತ್ತ ಆದರ್ಶ ಶಿಕ್ಷಕ ವೆಂಕಟೇಶ ಪ್ರಭು ನಿಧನ

 

ಬೆಳಗಾವಿ, ಜೂ. 10- ನಗರದ ರಾಮತೀರ್ಥ ನಗರ ನಿವಾಸಿ, ಆದರ್ಶ ಶಿಕ್ಷಕ ವೆಂಕಟೇಶ ರಾಮಕೃಷ್ಣ ಪ್ರಭು ಅವರು ಜೂನ 9 ರಂದು ತಡ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದ ಅವರಿಗೆ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

33 ವರ್ಷಗಳ ಸುದೀರ್ಘ ಅವಧಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ದಿವಂಗತರು ತಮ್ಮ ಎಲ್ಲ ವಿದ್ಯಾರ್ಥಿಗಳನ್ನು ಯಾವುದೇ ಭೇದಭಾವವಿಲ್ಲದೇ ತಿದ್ದಿ ತೀಡಿ ವಿದ್ಯಾಭ್ಯಾಸ ಮಾಡಿಸುತ್ತಿದ್ದರು.

ಅತ್ಯಂತ ಸರಳ ವ್ಯಕ್ತಿತ್ವದವರಾಗಿದ್ದ ಶ್ರೀಯುತರು ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ನಾಣ್ಣುಡಿಯಂತೆ ಆದರ್ಶದ ದಾರಿಯಲ್ಲಿ ಬಾಳಿ ಬದುಕಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.

ಜೂನ 10 ರಂದು ಶುಕ್ರವಾರ ನಗರದ ಸದಾಶಿವನಗರ ಸ್ಮಶಾನದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.

You might also like
Leave a comment