This is the title of the web page

ದೇಶಾದ್ಯಂತ ತೆರೆ ಕಂಡ ಆರ್ ಆರ್ ಆರ್ ಭರ್ಜರಿ ಪ್ರದರ್ಶನ

ಬೆಂಗಳೂರು, ೨೫- ಕರ್ನಾಟಕ ಸೇರಿದಂತೆ ದೇಶಾದ್ಯಂತ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ ಆರ್ ಆರ್ ಆರ್ ತೆರೆ ಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಆರ್​ಆರ್​ಆರ್​ ಸಿನೆಮಾವನ್ನು ಬಾಹುಬಲಿ ಖ್ಯಾತಿಯ ಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದು ತೆಲುಗು​ ಚಿತ್ರರಂಗದ ಜೂನಿಯರ್ ಎನ್​ಟಿಆರ್ ಮತ್ತು ರಾಮಚರಣ ತೇಜ್ ನಾಯಕರಾಗಿದ್ದಾರೆ. ನಟಿ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 30 ಶೋ ವ್ಯವಸ್ಥೆ ಮಾಡಲಾಗಿದೆ. ಎರಡು ಚಿತ್ರಮಂದಿರ ಹಾಗೂ ಎರಡೂ ಮಲ್ಟಿಪ್ಲೆಕ್ಸ್ ನಲ್ಲಿ ಆರ್ ಆರ್ ಆರ್ ಪ್ರದರ್ಶನ ಕಾಣುತ್ತಿದೆ. ಸುಧಾ ಹಾಗೂ ಶೃಂಗಾರ ಥಿಯೇಟರ್​ನಲ್ಲಿ ಪ್ರದರ್ಶನ ಕಾಣುತ್ತಿದ್ದು, ಇತ್ತ ಪಿವಿಆರ್ ಹಾಗೂ ಅರ್ಬನ್ ಒಯಾಸಿಸ್ ಮಾಲ್​ನಲ್ಲಿ ತಲಾ 10 ಶೋಗಳು ನಡೆಯುತ್ತಿವೆ. ಬೆಳಿಗ್ಗೆ 9ಕ್ಕೆ ಮೊದಲ ಶೋ ಆಯೋಜನೆಯಾಗಿದ್ದು, ಈಗಾಗಲೇ ಮೊದಲ ಶೋ ಟಿಕೆಟ್ ಮಾರಾಟ ಆಗಿವೆ.

ಇಂದು ಮುಂಜಾನೆ 3 ಗಂಟೆಗೆ ದೊಡ್ಡಬಳ್ಳಾಪುರ ನಗರದ ಸೌಂದರ್ಯ ಮಹಲ್​ನಲ್ಲಿ ಚಿತ್ರ ಪ್ರದರ್ಶನಗೊಂಡಿತು. ಅಭಿಮಾನಿಗಳಿಗಾಗಿ ಮುಂಜಾನೆಯೇ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಿತ್ರಮಂದಿರದಲ್ಲಿ ಅಭಿಮಾನಿಗಳು ಪರದೆ ಮುಂದೆ ಕುಣಿದು ಕುಪ್ಪಳಿಸಿದರು. ಆರ್​ಆರ್​ಆರ್​ ಸಿನಿಮಾ ಪ್ರಾರಂಭವಾಗುತ್ತಿದ್ದಂತೆ ಅಭಿಮಾನಿಗಳು​ ಹೂವಿನ ಸುರಿಮಳೆಗೈದರು. ನಂತರ ಸಿಹಿ ಹಂಚಿ, ಚಿತ್ರಮಂದಿರದ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ರಾಜ್ಯಾದ್ಯಂತ 45೦ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಿದ್ದು, ಈ ಪೈಕಿ 170ಕ್ಕೂ ಹಚ್ಚು ಸಿಂಗಲ್ ಸ್ಕ್ರೀನ್‌ ಮತ್ತು 450 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು, ಇಡೀ ದಿನದ ಟಿಕೆಟ್ ಕೂಡ ಮಾರಾಟವಾಗಿವೆ.

ಪಾವಗಡ ಪಟ್ಟಣದ ಮಾರುತಿ‌ ಚಿತ್ರಮಂದಿರದಲ್ಲಿ ಬೆಳಗಿನ ಜಾವ 3 ಗಂಟೆಗೆ ಚಿತ್ರ ಬಿಡುಗಡ ಮಾಡಲಾಗಿದೆ. ಯಾವುದೇ ಅಹಿಕತರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ವರ ವಹಿಸಿದ್ದರು.

ಅಭಿಮಾನಿಗಳ ಜಗಳ

ಈ ನಡುವೆ ಜೂ.ಎನ್‌ಟಿಆರ್ ಮತ್ತು ಚರಣ್ ಅಭಿಮಾನಿಗಳ ಮಧ್ಯೆ ಜಗಳ ಶುರುವಾಗಿತ್ತು. ತಮ್ಮ ನಾಯಕನೇ ಹೆಚ್ಚು ಎಂಬ ಮೂರ್ಖ ವಿಚಾರಕ್ಕೆ ಬೆಂಗಳೂರಿನ ಅಂಜನ್ ಚಿತ್ರಮಂದಿರದಲ್ಲಿ ಗಲಾಟೆ ನಡೆದಿದೆ. ಅಭಿಮಾನಿಗಳ ಕಿತ್ತಾಟದಿಂದ ಇತರೆ ಪ್ರೇಕ್ಷಕರಿಗೆ ಕಿರಿಕಿರಿಯಾಯಿತು. ಕೈಕೈ ಮಿಲಾಯಿಸುವ ಹಂತಕ್ಕೆ ಅಭಿಮಾನಿಗಳ ಜಗಳ ಹೋಗಿತ್ತು.

You might also like
Leave a comment