This is the title of the web page

ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳು ಮಾಡಿಕೊಂಡ ಉಕ್ರೇನ್ ಸೇನೆ -ರಶಿಯಾ ಆರೋಪ

ಮಾಸ್ಕೊ, 3- ಉಕ್ರೇನ್​ ಸೇನೆಯು ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆ ಇರಿಸಿಕೊಂಡಿದ್ದು, ಮಾನವ ಢಾಲು ತರಹ ಅವರನ್ನು ಬಳಸಿಕೊಳ್ಳುತ್ತಿದೆ ಎಂದು ರಶಿಯಾ ಆರೋಪ ಮಾಡಿದೆ.

ಉಕ್ರೇನ್ ಸೇನೆ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿಕೊಂಡಿದೆ ಎಂದು ರಶಿಯಾ ರಕ್ಷಣಾ ಸಚಿವಾಲಯ ಹೇಳಿದೆ.

ಅವರ ಮೇಲೆ ದಾಳಿ ತೀವ್ರವಾಗಿದ್ದರಿಂದ ಖಾರ್ಕೀವ್​​ನಲ್ಲಿರುವ ಭಾರತೀಯರನ್ನು ಅಲ್ಲಿಂದ ಸ್ಥಳಾಂತರ ಮಾಡಲು ರಶಿಯಾ ಮುಂದಾಯಿತು. ಆದರೆ ಉಕ್ರೇನ್​ ಸೇನೆ ಅವರನ್ನು ತಡೆಯಿತು ಮತ್ತು ವಾಪಸ್ ಕರೆದುಕೊಂಡು ಹೋಗಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ ಎಂದು ತಿಳಿಸಿದೆ.

ಖಾರ್ಕೀವ್​​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಅಲ್ಲಿಂದ ರಶಿಯಾದ ಬೆಲ್ಗೊರೊಡ್​​​ಗೆ ಹೋಗಲು ಇಚ್ಛಿಸಿದ್ದರು. ಅಲ್ಲಿಂದ ಅವರಿಗೆ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿತ್ತು. ಆದರೆ ಅವರೆಲ್ಲರನ್ನೂ ಉಕ್ರೇನ್​ ವಶಕ್ಕೆ ಪಡೆಯಿತು ಎಂದು ರಶಿಯಾ ರಕ್ಷಣಾ ಸಚಿವಾಲಯದ ಮೇಜರ್​ ಜನರಲ್​ ಇಗೋರ್​​ ಕೊನಾಶೆಂಕೋವ್ ಆರೋಪಿಸಿದ್ದಾರೆ.

ಉಕ್ರೇನ್ ಕೂಡ ಈಗ ಪ್ರತ್ಯಾರೋಪ ಮಾಡಿದ್ದು, ರಶಿಯಾ ಸೇನೆಯು ಭಾರತ, ಪಾಕಿಸ್ತಾನ, ಚೀನಾ ಮತ್ತು ಇನ್ನಿತರ ದೇಶಗಳ ವಿದ್ಯಾರ್ಥಿಗಳನ್ನು ಸೆರೆಯಾಳಗಳನ್ನಾಗಿ ಇಟ್ಟುಕೊಂಡಿದೆ ಎಂದು ಹೇಳಿದೆ.  ಉಕ್ರೇನ್​​ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಆರೋಪವನ್ನು ಮಾಡಿದೆ.

You might also like
Leave a comment