This is the title of the web page

ಭಾರತ ಧ್ವಜದ ಹೊರತು ಇತರ ದೇಶದ ಧ್ವಜಗಳನ್ನು ಅಳಿಸಿದ ರಶಿಯಾ

ಮಾಸ್ಕೊ, 4- ಬಾಹ್ಯಾಕಾಶ ನಿಲ್ದಾಣ ಬೈಕಾನೂರ್‌ನಲ್ಲಿ ಬೃಹತ್ ರಾಕೆಟ್‌ನಲ್ಲಿ ಚಿತ್ರಿಸಲಾಗಿರುವ ಅಮೇರಿಕ, ಬ್ರಿಟನ್ ಮತ್ತು ಜಪಾನ್ ಸೇರಿದಂತೆ ಹಲವಾರು ರಾಷ್ಟ್ರಗಳ ಧ್ವಜಗಳನ್ನು ರಶಿಯಾ ಸರಕಾರದ ಬಾಹ್ಯಾಕಾಶ ಸಂಸ್ಥೆಯು  ತೆಗೆದುಹಾಕಿದ್ದು ಆದರೆ ಭಾರತದ ಧ್ವಜವನ್ನು ಹಾಗೆಯೇ ಇರಿಸಿದೆ.

ಪೂರ್ವ ಯುರೋಪಿಯನ್ ರಾಷ್ಟ್ರದ ಕುಮ್ಮಕ್ಕಿನ ಕಾರಣ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್  (ನ್ಯಾಟೊ) ಗೆ ಸೇರಲು ಯತ್ನಿಸಿದ ಕಾರಣ  ಉಕ್ರೇನ್ ಮೇಲೆ ದಾಳಿ ನಡೆಸಿದ ಒಂದು ವಾರದ ನಂತರ ರಷ್ಯಾ ಮತ್ತು ಈ ರಾಷ್ಟ್ರಗಳ ನಡುವಿನ ಸಂಬಂಧವನ್ನು ತೋರಿಸುವ ಬಾಹ್ಯಾಕಾಶ ಸಂಸ್ಥೆ ರೊಸಕೊಮೊಸ ನ ಸಾಂಕೇತಿಕ ಕ್ರಮವು ಇದಾಗಿದೆ.

ರಷ್ಯಾದ ಪಡೆಗಳು ಉಕ್ರೇನ್‌ ನಗರಗಳನ್ನು ವಶಪಡಿಸಿಕೊಳ್ಳುತ್ತ ಮುನ್ನಡೆಯುತ್ತಿದ್ದಂತೆ ನ್ಯಾಟೊ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ, ಬ್ರಿಟನ್ ಮತ್ತು ಅಮೇರಿಕದ ಸ್ನೇಹಪರ ರಾಷ್ಟ್ರವಾದ ಜಪಾನ್ ವ್ಯಾಪಾರವನ್ನು ಗುರಿಯಾಗಿಸಿಕೊಂಡು ಕಠಿಣ ನಿರ್ಬಂಧಗಳನ್ನು ಘೋಷಿಸಿವೆ ಮತ್ತು ರಷ್ಯಾವನ್ನು ಕ್ರೀಡೆಯಿಂದ ಕಡಿತಗೊಳಿಸಲು ಆಕ್ರಮಣಕಾರಿ ಕ್ರಮಗಳನ್ನು ಕೈಗೊಂಡವು.

“ಬೈಕಾನೂರ್‌ನಲ್ಲಿರುವ ಲಾಂಚರ್‌ಗಳು ಕೆಲವು ದೇಶಗಳ ಧ್ವಜಗಳಿಲ್ಲದೆಯೇ ನಮ್ಮ ರಾಕೆಟ್ ಹೆಚ್ಚು ಸುಂದರವಾಗಿ ಕಾಣುತ್ತದೆ ಎಂದು ನಿರ್ಧರಿಸಿದರು” ಎಂದು ರೋಸ್ಕೊಸ್ಮಾಸ್ ಡೈರೆಕ್ಟರ್ ಜನರಲ್ ಡಿಮಿಟ್ರಿ ಒಲೆಗೊವಿಚ್ ರೊಗೊಜಿನ್ ಟ್ವೀಟ್ ಮಾಡಿದ್ದಾರೆ.

ಬಾಹ್ಯಾಕಾಶ ನಿಲ್ದಾಣದಲ್ಲಿ ರಶಿಯದ ಕಾರ್ಮಿಕರು ಭಾರತದ ತ್ರಿವರ್ಣ ಧ್ವಜ ಬಿಟ್ಟು ಇತರ ರಾಷ್ಟ್ರಗಳ ಧ್ವಜಗಳನ್ನು ಅಳಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಟ್ವೀಟ್ ಹೊಂದಿದೆ. ಭಾರತದ ಧ್ವಜ ಹಾಗೆಯೇ ಉಳಿದಿದೆ.

ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣವನ್ನು ಬಲವಾಗಿ ಖಂಡಿಸಿದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ನಿರ್ಣಯಕ್ಕೆ ಭಾರತ ಹಾಜರಾಗಿರಲಿಲ್ಲ. ಇದು ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಭಾರತವು ಮೂರನೇ ಗೈರುಹಾಜರಿಯಾಗಿದೆ. ಭಾರತದ ನಿಲುವಿಗೆ ರಶಿಯಾ ಧನ್ಯವಾದ ಹೇಳಿದೆ.

You might also like
Leave a comment