This is the title of the web page

ಟ್ರಕ್ ಗಳಲ್ಲಿ ಇವಿಎಂ ಸಾಗಿಸಿದ ಆರೋಪ; ಸಮಾಜವಾದಿ ಪಕ್ಷದ ಪ್ರತಿಭಟನೆ

ಲಖನೌ, ಮಾರ್ಚ 8- ಉತ್ತರ ಪ್ರದೇಶದ ವಾರಣಾಸಿಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಗಳನ್ನು ಟ್ರಕ್ ಗಳಲ್ಲಿ ಕದ್ದುಕೊಂಡು ಹೋಗಲಾಗಿದೆ ಎಂದು ಅಖಿಲೇಶ ಯಾದವ ಆರೋಪಿಸಿದ ನಂತರ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ.

ಮಂಗಳವಾರ ರಾತ್ರಿ ವೇಳೆಗೆ ವಾರಣಾಸಿಯ ಪಹರಿಯಾ ಮಂಡಿ ಪ್ರದೇಶದ ಸ್ಟ್ರಾಂಗ್ ರೂಮ್ ಎದುರಿನಲ್ಲಿ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ನೆರೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುವುದಕ್ಕೆ ಎರಡು ದಿನಗಳು ಬಾಕಿ ಇರುವಂತೆ ವಾರಣಾಸಿ ಕ್ಷೇತ್ರದಲ್ಲಿ ಇವಿಎಂ) ಕದ್ದುಕೊಂಡು ಹೋಗಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ  ಆರೋಪಿಸಿದ್ದಾರೆ.

ವಾರಣಾಸಿಯಲ್ಲಿ ನಾವು ಒಂದು ಟ್ರಕ್ ಅಡ್ಡಗಟ್ಟಿದೆವು. ಆದರೆ ಎರಡು ಟ್ರಕ್‌ಗಳು ತಪ್ಪಿಸಿಕೊಂಡು ಹೋಗಿವೆ. ಯಾವುದೇ ಸಂಶಯಾಸ್ಪದ ಚಟುವಟಿಕೆ ಇಲ್ಲದಿದ್ದರೆ ಇವಿಎಂ ಹೊಂದಿರುವ ಎರಡು ಟ್ರಕ್‌ಗಳು ಏಕೆ ತಪ್ಪಿಸಿಕೊಂಡು ಹೋಗಬೇಕಿತ್ತು? ಅಭ್ಯರ್ಥಿಗಳ ಒಪ್ಪಿಗೆಯಿಲ್ಲದೇ ಯಾವುದೇ ಇವಿಎಂಗಳನ್ನು ಎಲ್ಲಿಯೂ ತೆಗೆದುಕೊಂಡು ಹೋಗುವಂತಿಲ್ಲ” ಎಂದು ಅಖಿಲೇಶ ಯಾದವ ಹೇಳಿದ್ದಾರೆ.

ಕಳೆದ 2017ರಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 5,000ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 47 ಸ್ಥಾನಗಳನ್ನು ಗೆದ್ದಿತ್ತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಹೇಳಿದ್ದಾರೆ. ಈಗ ಎಕ್ಸಿಟ್ ಪೋಲ್‌ಗಳು “ಬಿಜೆಪಿ ಗೆಲ್ಲುತ್ತದೆ ಎಂಬ ಲೆಕ್ಕಾಚಾರವನ್ನು ಹಾಕುತ್ತಿವೆ. ಕಳ್ಳತನದಿಂದ ಯಾವುದೇ ಲೆಕ್ಕಾಚಾರವನ್ನು ತಿರುವು ಮುರುವು ಮಾಡಬಹುದು ಎಂದು ಅವರು ಆರೋಪಿಸಿದ್ದಾರೆ.

You might also like
Leave a comment