This is the title of the web page

ಮಹಾರಾಷ್ಟ್ರದ ಮರಳು ವ್ಯಾಪಾರಿಯ ಆಶ್ರಯದಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿ

 

ಪುಣೆ, ೨೯- ಪಿಎಸ್‌ಐ ನೇಮಕಾತಿ ಅಕ್ರಮದ ರೂವಾರಿ ಆಗಿರುವ ಕಲಬುರಗಿಯ ದಿವ್ಯಾ ಹಾಗರಗಿ ಕಳೆದ ಹದಿನೈದು ದಿನಗಳಿಂದ ಮಹಾರಾಷ್ಟ್ರ, ದ ಪುಣೆಯ ಮರಳು ಉದ್ಯಮಿ ಸುರೇಶ ಕಾಟೇಗಾಂವ ಅವರ ಆಶ್ರಯದಲ್ಲಿದ್ದಳು.

ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಮಹಾರಾಷ್ಟ್ರಕ್ಕೆ ತೆರಳಿದ ದಿವ್ಯಾ, ತಮ್ಮ ಪತಿ ರಾಜೇಶ ಅವರ ಮಿತ್ರ ಸುರೇಶ ಕಾಟೇಗಾಂವ ಬಳಿ ಆಶ್ರಯ ಪಡೆದುಕೊಂಡಿದ್ದಳು. ಆಶ್ರಯಕೊಟ್ಟ ಸುರೇಶ ಕಾಟೇಗಾಂವ ಮರಳು ದಂಧೆ ಮಾಡುತ್ತಿದ್ದು ಆಶ್ರಯ ನೀಡಿದ್ದಕ್ಕೆ ಆತನನ್ನೂ ಸಹ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಕರಣದಲ್ಲಿ ದಿವ್ಯಾ ಹಾಗರಗಿ, ಅಚ೯ನಾ, ಸುನಂದಾ, ಶಾಂತಿಬಾಯಿ, ಸುರೇಶ ಕಾಟೇಗಾಂವ ಸೇರಿದಂತೆ ಒಟ್ಟು ಆರು ಜನರ ಬಂಧನವಾಗಿದೆ.

You might also like
Leave a comment