This is the title of the web page

ಸಂಗನಬಸವ ಸ್ವಾಮೀಜಿ ಲಿಂಗೈಕ್ಯ

ಬೆಂಗಳೂರು, 22- ಗದಗ ಜಿಲ್ಲೆಯ ಹಾಲಕೇರಿ ಶ್ರೀ ಅನ್ನದಾನೇಶ್ವರ ಮಠದ ಅಭಿನವ ಅನ್ನದಾನೇಶ್ವರ ಪರಮಪೂಜ್ಯ ಶ್ರೀ ಡಾ.ಸಂಗನಬಸವ ಸ್ವಾಮೀಜಿಗಳು ವಯೋಸಹಜ ಅಸೌಖ್ಯದಿಂದಾಗಿ ಇಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು. ಅವರಿಗೆ 89 ವರುಷ ವಯಸ್ಸಾಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ತೆರಳಿ ಲಿಂಗೈಕ್ಯ ಸ್ವಾಮಿಗಳ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ , ಸಿ ಸಿ ಪಾಟೀಲ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಶ್ರೀಗಳ ಅಗಲಿಕೆ ತೀವ್ರ ನೋವು ತಂದಿದ್ದು ರಾಜ್ಯದ ಆಧ್ಯಾತ್ಮಿಕ, ಸಾಮಾಜಿಕ ಕ್ಷೇತ್ರಕ್ಕಾದ ದೊಡ್ಡ ನಷ್ಟ. 128 ಶಾಖಾ ಮಠ, 60ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವರು ಸಮಾಜಕ್ಕೆ ಅವಿರತ ಸೇವೆ ಸಲ್ಲಿಸಿದ್ದರು. ಜಾತಿಬೇದ ಎಂದೂ ಮಾಡದ ಸ್ವಾಮಿಗಳು ದೀನ ದಲಿತರಿಗೂ ಧ್ವನಿಯಾಗಿದ್ದರು ಎಂದು ಸಂತಾಪ ಸೂಚಿಸಿದರು.

ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ಅಪಾರ ಭಕ್ತಬಳಗ, ಅನುಯಾಯಿಗಳು ಹಾಗೂ ಶಿಷ್ಯವೃಂದಕ್ಕೆ ಈ ನೋವು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

You might also like
Leave a comment