This is the title of the web page

ಸಂಗೀತಾ ಬನ್ನೂರ ಅವರಿಗೆ ’ಕುಸುಮ ಶ್ರೀ’ ಪ್ರಶಸ್ತಿ ಪ್ರದಾನ

 

ಗೋಕಾಕ, ಮಾ.೨೮- ಸಮಾಜ ಸೇವಕಿ ಹಾಗೂ ನಗರದ ಖ್ಯಾತ ನ್ಯಾಯವಾದಿಯಾಗಿರುವ ಶ್ರೀಮತಿ ಸಂಗೀತಾ ಶಿವಾನಂದ ಬನ್ನೂರ ಅವರಿಗೆ ’ಕುಸುಮ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗೋಕಾಕದ ಜೆ.ಸಿ.ಐ. ಕರದಂಟು ಸಿಟಿ ಗೋಕಾಕ ಸಂಘಟನೆ ವತಿಯಿಂದ ಸ್ಪೈಸ್ ಗಾರ್ಡನ್ ನಲ್ಲಿ ದಿ.೨೭ ರಂದು ಸಂಜೆ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಸಂಗೀತಾ ಬನ್ನೂರ ಅವರಿಗೆ ಪ್ರತಿಷ್ಠಿತ ’ಕುಸುಮ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಾಧಕ ಮಹಿಳೆಯಾಗಿ ಗುರುತಿಸಿಕೊಂಡಿರುವ ಸಂಗೀತಾ ಬನ್ನೂರ ಇವರು ನ್ಯಾಯವಾದಿಯಾಗಿ, ಮಧ್ಯಸ್ಥಗಾರರಾಗಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಮಹಿಳಾ ಆಯೋಗದ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಅವರು, ಸಿರಿಗನ್ನಡ ಮಹಿಳಾ ವೇದಿಕೆ ಅಧ್ಯಕ್ಷರಾಗಿ, ಗೋಕಾಕ ಬಸವೇಶ್ವರ ಬ್ಯಾಂಕಿನ ಸಲಹಾ ಸಮಿತಿ ಸದಸ್ಯರಾಗಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

You might also like
Leave a comment