This is the title of the web page

ಪೋಲಿಸ್ ಬಂದೋಬಸ್ತಿನಲ್ಲಿ ಹತ್ಯೆಯಾದ ಸತೀಶ ಅಂತ್ಯಕ್ರಿಯೆ : ಮಡುಗಟ್ಟಿದ ಶೋಕ

ಬೆಳಗಾವಿ : ಕಾಲಭೈರವನಾಥ ದೇವಸ್ಥಾನದ ಜಾಗ ವಿಚಾರವಾಗಿ ಗೌಂಡವಾಡ ಗ್ರಾಮದಲ್ಲಿ ನಡೆದ ಗಲಾಟೆಯಲ್ಲಿ ಹತ್ಯೆಯಾಗಿದ್ದ  ಗ್ರಾಮದ ಯುವಕ ಸತೀಶ ಪಾಟೀಲ ಅಂತ್ಯಕ್ರಿಯೆ ಪೊಲೀಸ್ ಬಂದೋಬಸ್ತಿನಲ್ಲಿ ಗ್ರಾಮದಲ್ಲಿ ಜರುಗಿತು.

ಕಾಲ ಭೈರವನಾಥ ದೇವಸ್ಥಾನದ ಜಾಗದ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಶನಿವಾರ ರಾತ್ರಿ ಸತೀಶ ಪಾಟೀಲ ಹತ್ಯೆಯಾಗಿದ್ದರು. ಇದರಿಂದ ಇಡೀ ಗ್ರಾಮದಲ್ಲಿ ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಿಂದ ಇಡೀ ಗ್ರಾಮದಲ್ಲಿ ಬಿಗುವಿನ ವಾತಾವರಣವೇ ನಿರ್ಮಾಣವಾಗಿತ್ತು.

ಇಂದು ಮಧ್ಯಾಹ್ನ ಕೆಎಲ್‍ಇ ಆಸ್ಪತ್ರೆಯಿಂದ ಸತೀಶ ಪಾಟೀಲ ಮೃತದೇಹ ಗೌಂಡವಾಡ ಗ್ರಾಮದ ಅವರ ಮನೆಗೆ ಬರುತ್ತಿದ್ದಂತೆ ಪತ್ನಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಸತೀಶ ಪಾಟೀಲ ಮನೆಯ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಮಗ ಸತೀಶನ ಪ್ರಾರ್ಥಿವ ಶರೀರಕ್ಕೆ ಅವರ ತಂದೆ ಅಗ್ನಿಸ್ಪರ್ಶ ನೀಡಿದರು. ಘಟನೆಗೆ ಸಂಭವಿಸಿದಂತೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮುಂದುವರಿಸಲಾಗಿದೆ.

You might also like
Leave a comment