This is the title of the web page

ಸತೀಶ ಜಾರಕಿಹೊಳಿ ಹೆಸರಲ್ಲಿ ಅಶ್ಲೀಲ ವಿಡಿಯೋ ಅಪ್ ಲೋಡ್; ದೂರು ದಾಖಲು

ಬೆಳಗಾವಿ, ೨೦- ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಯಮಕನಮರ್ಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಅವರ ಹೆಸರಿಗೆ ಕಳಂಕ ತರಲು ಕೆಲ ಕಿಡಿಗೇಡಿಗಳು ‘ಸತೀಶ ಜಾರಕಿಹೊಳಿ ಸೆಕ್ಸ ವಿಡಿಯೋಸ್’ ಎಂದು ಅಶ್ಲೀಲ ವೆಬ್‌ಸೈಟಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ಪೋಸ್ಟ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ಸತೀಶ ಜಾರಕಿಹೊಳಿ ಅಭಿಮಾನಿ ವಿಜಯ ತಳವಾರ ಎಂಬವರು ದೂರು ನೀಡಿದ್ದಾರೆ.

ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಸತೀಶ ಜಾರಕಿಹೊಳಿ ಹೆಸರು ಬಳಸಿ ಈ ರೀತಿ ಪೋಸ್ಟ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸತೀಶ ಜಾರಕಿಹೊಳಿ ಹೆಸರು ದುರ್ಬಳಕೆ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.

ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಜಯ ತಳವಾರ ಅವರು, ಬೇರೆ ಬೇರೆ ಅಶ್ಲೀಲ ವೆಬ್‌ಸೈಟ್‌‌ಗಳಿಗೆ ಲಿಂಕ್ ಆಗುವಂತೆ ಲಿಂಕ್ ತಯಾರಿಸಿ ಅಶ್ಲೀಲ ವೆಬ್‌ಸೈಟಗಳಲ್ಲಿ ಸತೀಶ ಜಾರಕಿಹೊಳಿ ಹೆಸರು ಬರುವಂತೆ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ವಿಜಯ ತಳವಾರ  ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ಸಿಇಎನ್ ಪೊಲೀಸರು ತನಿಖೆ ನಡೆಸಿದ್ದಾರೆ‌.

You might also like
Leave a comment