This is the title of the web page

ಶಾಲಾ ಬೇಸಿಗೆ ರಜೆ ವಿಸ್ತರಣೆ ಮಾಡದಿರಲು ಕೇಂದ್ರದ ಸಲಹೆ

 

ಹೊಸದಿಲ್ಲಿ, ೧೨- ಶಾಲೆ ಆರಂಭ ಮುಂದೂಡಿಕೆ ಬೇಡ ಎಂದು ಹೇಳಿರುವ ಕೇಂದ್ರ ಸರ್ಕಾರವು ಈ ಬಗ್ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೇಸಿಗೆಯ ಕಾರಣ ಸಮವಸ್ತ್ರಗಳನ್ನು ಕಡ್ಡಾಯ ಮಾಡದಂತೆ ಸಲಹೆ ನೀಡಿದ್ದು ಕೇಂದ್ರ ಶಿಕ್ಷಣ ಸಚಿವಾಲಯದಿಂದ ರಾಜ್ಯಗಳಿಗೆ ಈ ಕುರಿತಾಗಿ ಸಲಹೆ ನೀಡಲಾಗಿದೆ.

ದೇಶದ ಅನೇಕ ರಾಜ್ಯಗಳಲ್ಲಿ ಉಷ್ಣ ಮಾರುತದ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ.

ಬಿಸಿಲಿನ ಅಡ್ಡ ಪರಿಣಾಮದಿಂದ ಮಕ್ಕಳನ್ನು ರಕ್ಷಿಸಲು ಶಾಲಾ ಸಮಯದಲ್ಲಿ ಬದಲಾವಣೆ, ಸಮವಸ್ತ್ರದಲ್ಲಿ ವಿನಾಯಿತಿ ಸೇರಿದಂತೆ ಹಲವು ಮಾರ್ಪಾಡು ಮಾಡಿಕೊಳ್ಳಲು ಸೂಚಿಸಲಾಗಿದೆ.

ಶಾಲೆಗಳನ್ನು ಮುಚ್ಚಬಾರದು, ಸಮಯವನ್ನು ಬದಲಾಯಿಸಬೇಕು. ಬೆಳಿಗ್ಗೆ ಏಳು ಗಂಟೆಯಿಂದಲೇ ಶಾಲೆ ಶುರು ಮಾಡಿ, ತರಗತಿ ಅವಧಿ ಕಡಿತಗೊಳಿಸಿ ಮಧ್ಯಾಹ್ನದ ಒಳಗೆ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ಸಮವಸ್ತ್ರ ಕಡ್ಡಾಯ ಮಾಡಬಾರದು. ಮಕ್ಕಳಿಗೆ ಅನುಕೂಲವಾಗುವ ಬಟ್ಟೆ ಧರಿಸಲು ಅವಕಾಶ ನೀಡಬೇಕು.

ಕೊಠಡಿಯ ಹೊರಗಿನ ಚಟುವಟಿಕೆ ಕಡಿಮೆ ಮಾಡಬೇಕು ಶಾಲೆಗಳಲ್ಲಿ ಒ.ಆರ್.ಎಸ್. ಮತ್ತು ಗ್ಲೂಕೋಸ್ ಸಂಗ್ರಹಿಸಿಟ್ಟುಕೊಳ್ಳಬೇಕು. ನೀರು ಕುಡಿಯುವಂತೆ ಮಕ್ಕಳಿಗೆ ಅರಿವು ಮೂಡಿಸಬೇಕು. ಚರ್ಮದ ಶೂ ಬದಲು ಕ್ಯಾನ್ವಾಸ್ ಶೂ ಬಳಸಲು ಅವಕಾಶ ನೀಡಬೇಕೆಂದು ಹೇಳಲಾಗಿದೆ.

You might also like
Leave a comment