Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ರಾಜ್ಯಾದ್ಯಂತ ಇಂದಿನಿಂದ ಸೀಟ ಬೆಲ್ಟ ಕಡ್ಡಾಯ; ತಪ್ಪಿದರೆ ಭಾರಿ ದಂಡ


ಬೆಂಗಳೂರು : ವಾಹನ ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ ಧರಿಸುವುದು ಕಡ್ಡಾಯಗೊಳಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ ಆದೇಶ ಹೊರಡಿಸಿದ್ದಾರೆ.

ಈ ಆದೇಶ ಇಂದಿನಿಂದಲೇ ಜಾರಿಗೆ ಬರುವಂತೆ ರಾಜ್ಯದಲ್ಲಿ ವಾಹನ ಚಲಾಯಿಸುವ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಸೀಟ್ ಬೆಲ್ಟ  ಧರಿಸದೇ ವಾಹನವನ್ನು ಚಲಾಯಿಸಿದರೆ ಅಂತವರಿಗೆ 1 ಸಾವಿರ ದಂಡ ವಿಧಿಸಲಾಗುತ್ತದೆ ಎಂದಿದ್ದಾರೆ.

ವಾಹನ ಚಲಾಯಿಸುವ ಸಂದರ್ಭದಲ್ಲಿ ಸೀಟ್ ಬೆಲ್ಟ ಧರಿಸದೇ ಇದ್ದರೇ ಅಪಘಾತವಾದ ಸಂದರ್ಭದಲ್ಲಿ ಏರ್ ಬ್ಯಾಗ್ ಓಪನ್ ಆಗುವುದಿಲ್ಲ. ಹೀಗೆ ಏರ್ ಬ್ಯಾಗ್ ಓಪನ್ ಆಗದೇ ಇದ್ದಾಗ ಅಪಘಾತದ ವೇಳೆಯಲ್ಲಿ ಸಾವು ನೋವು ಸಂಭವಿಸಿವೆ.

ಈ ಹಿನ್ನಲೆಯಲ್ಲಿಯೇ ಕೇಂದ್ರ ಸರ್ಕಾರ ಸೀಟ್ ಬೆಲ್ಟ  ಕಡ್ಡಾಯಗೊಳಿಸುವ ಕರಡನ್ನು ಪ್ರಕಟಿಸಿತ್ತು. ಈ ಆದೇಶದಂತೆ ರಾಜ್ಯದಲ್ಲಿಯೂ ಸೀಟ್ ಬೆಲ್ಟ ಕಡ್ಡಾಯಗೊಳಿಸಲಾಗಿದೆ.


A B Dharwadkar
the authorA B Dharwadkar

Leave a Reply