This is the title of the web page

ಕನ್ನಡಿಗರ ಹೊಟೆಲ್ ಬಂದ್ ಮಾಡಿಸಿದ ಶಿವಸೇನೆ

ಕೊಲ್ಲಾಪುರ, 18- ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆ ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ದ ಕೊಲ್ಹಾಪುರದಲ್ಲಿ ಕನ್ನಡಿಗರ ಹೋಟೆಲ್ ಗಳನ್ನು ಶಿವಸೇನೆ ಕಾರ್ಯಕರ್ತರು ನಿನ್ನೆ ಶುಕ್ರವಾರ ರಾತ್ರಿಯಿಂದಲೇ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆ ಪುಂಡಾಟದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ – ಮಹಾರಾಷ್ಟ್ರ ಮಧ್ಯ ಬಸ್ ಸಂಚಾರ ಸಹ ಶನಿವಾರ ಮುಂಜಾನೆಯಿಂದ ಸ್ಥಗಿತಗೊಳಿಸಲಾಗಿದೆ.

ಕರ್ನಾಟಕದ ಬಸ್ ಗಳು ಎರಡು ರಾಜ್ಯದ ಗಡಿ ಪಟ್ಟಣವಾದ ನಿಪ್ಪಾಣಿವರೆಗೆ ಹಾಗೆಯೇ ಮಹಾರಾಷ್ಟ್ರ ದ ಬಸ್ ಗಳು ಅ ರಾಜ್ಯದ ಕೊನೆಯ ಪಟ್ಟಣವಾದ ಕಾಗಲ್ ವರೆಗೆ ಮಾತ್ರ ಸಂಚರಿಸುತ್ತಿವೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರು ಬಸ್ ಗಳಿಗೆ ಕಲ್ಲು ತೂರಾಟ ಮತ್ತಿತರ ಹಿಂಸಾಚಾರ ಕೃತ್ಯ ನಡೆಸಬಹುದೆನ್ನುವ ಹಿನ್ನೆಲೆಯಲ್ಲಿ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂದು ಕೆಎಸ್ ಆರ್ ಟಿಸಿ ಮೂಲಗಳು
ತಿಳಿಸಿವೆ.

You might also like
Leave a comment