Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ರಾಜ್ಯೋತ್ಸವದ ದಿನ ರಾಜ್ಯಕ್ಕೆ ನುಗ್ಗಲಿರುವ ಶಿವಸೇನೆ ಕಾರ್ಯಕರ್ತರು

shivsena

ಬೆಳಗಾವಿ : ಕರ್ನಾಟಕ ರಾಜ್ಯೋತ್ಸವದಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಆಚರಿಸಲು ನಿರ್ಧರಿಸಿರುವ ನಾಡವಿರೋಧಿ ಕರಾಳ ದಿನಾಚರಣೆಗೆ ಬೆಂಬಲಾರ್ಥವಾಗಿ ಮಹಾರಾಷ್ಟ್ರದ ಉದ್ದವ ಠಾಕ್ರೆ ಬಣದ ಶಿವಸೇನೆ ಈ ದಿನವನ್ನು ವೇದನಾ ದಿವಸ ಎಂದು ಆಚರಿಸಲಿದೆ.

ಬೆಳಗಾವಿಯಲ್ಲಿ ಎಂಇಎಸ್ ಆಯೋಜಿಸಲಿರುವ ಕರಾಳ ದಿನದ ಕಾರ್ಯಕ್ರಮದಲ್ಲಿ ಶಿವಸೇನೆ ಪಾಲ್ಗೊಳ್ಳಲಿದೆ.

ಈ ಕುರಿತು ಕೊಲ್ಹಾಪುರದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿವಸೇನೆಯ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ, 1956ರ ಜನವರಿ 17ರಂದು ಕೇಂದ್ರ ಸರಕಾರ ಭಾಷಾವಾರು ಪ್ರಾಂತ್ಯ ರಚನೆ ಮಾಡಿ ಅದೇ ವರ್ಷದ ಅಂದರೆ 1956ರ ನವೆಂಬರ 1ರಂದು ಮುಂಬಯಿ ಪ್ರಾಂತ್ಯದಲ್ಲಿದ್ದ ಬೆಳಗಾವಿ, ಧಾರವಾಡ, ವಿಜಯಪುರ ಮತ್ತು ಕಾರವಾರ ಜಿಲ್ಲೆಗಳೂ ಸೇರಿದಂತೆ ಹೈದರಾಬಾದ ಪ್ರಾಂತ್ಯದಲ್ಲಿದ್ದ ಬೀದರ ಮತ್ತು ಗುಲ್ಬರ್ಗ ಜಿಲ್ಲೆಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಿತು. ಇದನ್ನು ಪ್ರತಿಭಟಿಸಿ ಬೆಳಗಾವಿಯ ಮರಾಠಿಗರು ಕರ್ನಾಟಕ ರಾಜ್ಯ ಸ್ಥಾಪನೆಯಾದ ನವೆಂಬರ್ 1 ರಂದು ಕಪ್ಪು ದಿನ ಅಥವಾ ಕರಾಳ ದಿನವೆಂದು ಆಚರಿಸುತ್ತಿದ್ದು ಈ ವರುಷ ಶಿವಸೇನೆ ಬೆಂಬಲಾರ್ಥವಾಗಿ ವೇದನಾ ದಿವಸ ಆಚರಿಸಲಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಆಚರಿಸಲಿರುವ ಕರಾಳ ದಿನದಲ್ಲಿ ಕೊಲ್ಹಾಪೂರಿನ ನೂರಾರು ಶಿವಸೇನೆಯ ಕಾರ್ಯಕರ್ತರು ಕೊಲ್ಹಾಪುರದಿಂದ ಬೆಳಗಾವಿಗೆ ವೇದನಾ ದಿವಸಕ್ಕೆ ಪಂಜಿನ ಮೆರವಣಿಗೆ ಏರ್ಪಡಿಸಿದೆ.

ಅಕ್ಟೋಬರ 31ರಂದು ಮುಂಜಾನೆ 10ಗಂಟೆಗೆ ಕೊಲ್ಹಾಪುರದ ರಾಜಶ್ರೀ ಶಾಹೂ ಮಹಾರಾಜರ ಸಮಾಧಿ ಸ್ಥಳದಿಂದ ತೆರಳಲಿರುವ ಬೈಕ್ ಕಾರ್ ರ್ಯಾಲಿ ನಿಪ್ಪಾಣಿ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಲಿದೆ, ಅನುಮತಿ ದೊರೆಯದಿದ್ದರೆ ಶಿನ್ನೊಳ್ಳಿ ಮಾರ್ಗವಾಗಿ ಬೆಳಗಾವಿ ತಲುಪಲಿದೆ ಎಂದು ತಿಳಿಸಿದರು.

ಶಿವಸೇನೆಯ ಈ ಯಾತ್ರೆಯನ್ನು ಕರ್ನಾಟಕ ಪ್ರವೇಶಿಸಲು ರಾಜ್ಯ ಅನುಮತಿ ಕೊಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.


A B Dharwadkar
the authorA B Dharwadkar

Leave a Reply