Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Entertainment News

“ಮಡದಿ ಮಾತು ಕೇಳಬೇಕೆ?” ಹರಟೆ ಕಾರ್ಯಕ್ರಮ


ಬೆಳಗಾವಿ: ನಗರದ ಹಾಸ್ಯಕೂಟದವರು ಕನ್ನಡ ರಾಜ್ಯೋತ್ಸವ ನಿಮಿತ್ತ ಇದೇ ದಿನಾಂಕ 12 ರಂದು (ಶನಿವಾರ) ಸಂಜೆ 4-30 ಕ್ಕೆ ಹಿಂದವಾಡಿಯ ಐ.ಎಮ್.ಇ.ಆರ್. (ಗೋಮಟೇಶ ವಿದ್ಯಾಪೀಠ ಪಕ್ಕ) ಸಭಾಭವನದಲ್ಲಿ “ಮಡದಿ ಮಾತು ಕೇಳಬೇಕೆ?” ಎಂಬ ಹರಟೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಅಧ್ಯಕ್ಷತೆಯನ್ನು ಹಿರಿಯ ಕವಿ ಡಾ ಜಿನದತ್ತ ದೇಸಾಯಿ ವಹಿಸಲಿದ್ದು ಅತಿಥಿಗಳಾಗಿ ಹಿರಿಯ ಕವಿ ಪ್ರೊ. ಎಂ. ಎಸ್. ಇಂಚಲ ಆಗಮಿಸಲಿದ್ದಾರೆ. ಪ್ರೊ. ಜಿ. ಕೆ.ಕುಲಕರ್ಣಿ ಹರಟೆ ಸೂತ್ರದಾರ ಕಾರ್ಯ ನಿರ್ವಹಿಸಲಿದ್ದು. ಮಡದಿ ಮಾತು ಕೇಳಬೇಕೆಂದು ಗುಂಡೇನಟ್ಟಿ ಮಧುಕರ, ಎಂ. ಬಿ. ಹೊಸಳ್ಳಿ ಹಾಗೂ ಭಾರತಿ ಮಠದ ಮಾತನಾಡಲಿದ್ದಾರೆ. ಜಿ ಎಸ್ ಸೋನಾರ, ಅಶೋಕ ಮಳಗಲಿ ಹಾಗೂ ಡಾ. ಶೈಲಜಾ ಕುಲಕರ್ಣಿ ಮಡದಿ ಮಾತನ್ನೇಕೆ ಕೇಳಬೇಕೆನ್ನುವ ಧೈರ್ಯ ತೋರಲಿದ್ದಾರೆ.

ಅರವಿಂದ ಹುನಗುಂದ ನಿರೂಪಿಸಲಿದ್ದು, ವಿಜಯಕುಮಾರ ಹನಗಂಡಿ ಸ್ವಾಗತಿಸಲಿದ್ದಾರೆ.


A B Dharwadkar
the authorA B Dharwadkar

Leave a Reply