Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National NewsCrime News

ಕೊಲೆಯಾಗುವ ಭೀತಿಯನ್ನು 2 ವರ್ಷಗಳ ಹಿಂದೆಯೇ ಪೊಲೀಸರಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದ ಶ್ರದ್ಧಾ!


ಹೊಸದಿಲ್ಲಿ, ೨೩- ತಾನು ಲಿವಿಂಗ್ ರಿಲೇಶನ್ ನಲ್ಲಿದ್ದ ಪ್ರಿಯಕರ ಅಫ್ತಾಬ್ ನಿಂದಲೇ ಬರ್ಬರವಾಗಿ ಹತ್ಯೆಗೀಡಾದ ಶ್ರದ್ಧಾ ಕುರಿತಂತೆ ದಿನಕ್ಕೊಂದು ಬೆಚ್ಚಿ ಬೀಳಿಸುವ ಸಂಗತಿಗಳು ಬಹಿರಂಗವಾಗುತ್ತಿವೆ. ಜೊತೆಯಾಗಿದ್ದಾಗಿನಿಂದಲೂ ಶ್ರದ್ಧಾಳಿಗೆ ನಿರಂತರ ಹಿಂಸೆ ನೀಡುತ್ತಿದ್ದ ಅಫ್ತಾಬ್ ಕೊಲೆ ಬೆದರಿಕೆಯನ್ನೂ ಹಾಕಿದ್ದ ಎಂಬುದು ಈಗ ಬಹಿರಂಗವಾಗಿದೆ.

ಹತ್ಯೆಯಾಗುವ ಮೊದಲು ಅಂದರೆ 2020 ರಲ್ಲಿ ಅಫ್ತಾಬ್ ನ ತೀವ್ರ ಹಿಂಸೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಕೆ ನವೆಂಬರ್ 23, 2020ರಲ್ಲಿ ಪೊಲೀಸರಿಗೆ ಪತ್ರ ಒಂದನ್ನು ಬರೆದಿದ್ದು, ಇದರಲ್ಲಿ ಅಫ್ತಾಬ್ ನನ್ನನ್ನು ಕೊಲೆ ಮಾಡುವ ಸಾಧ್ಯತೆ ಇದೆ. ತುಂಡು ತುಂಡಾಗಿ ಕತ್ತರಿಸಿ ಬಿಸಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತನ್ನ ಆತಂಕ ವ್ಯಕ್ತಪಡಿಸಿದ್ದಳು.

ಅಲ್ಲದೇ ಈ ಎಲ್ಲ ವಿಚಾರ ಅಫ್ತಾಬ್ ನ ಪೋಷಕರಿಗೂ ಸಹ ತಿಳಿದಿದೆ ಎಂದು ಶ್ರದ್ಧಾ ಹೇಳಿದ್ದು, ಕಡೆಗೂ ಆಕೆಯ ಆತಂಕ ನಿಜವಾಗಿದ್ದು ಮಾತ್ರ ದುರಂತ. ಶ್ರದ್ದಾಳನ್ನು 35 ತುಂಡುಗಳಾಗಿ ಕತ್ತರಿಸಿದ್ದ ಅಫ್ತಾಬ್ ಮೂರು ವಾರಗಳ ಕಾಲ ಮೃತ ದೇಹವನ್ನು ಫ್ರಿಡ್ಜ್ ನಲ್ಲಿ ಇರಿಸಿ ಅವುಗಳನ್ನು ತುಂಡು ತುಂಡು ಮಾಡಿ ವಿವಿಧ ಭಾಗಗಳಲ್ಲಿ ಎಸೆದಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


Leave a Reply