This is the title of the web page

ಸಿದ್ದರಾಮಯ್ಯ ಅಸ್ವಸ್ತ

ರಾಮನಗರ, 9- ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ಕಿಮೀ ನಡೆದ ನಂತರ ಅಸ್ವಸ್ಥರಾಗಿದ್ದರಿಂದ ಪಾದಯಾತ್ರೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಇತ್ತೀಚಿಗಷ್ಟೇ ಅವರು ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ತೆಗೆದುಕೊಂಡಿದ್ದರು. ಅದಕ್ಕೆ ಅವರಿಗೆ ಸ್ವಲ್ಪಮಟ್ಟಿನ ಜ್ವರವಿತ್ತು ಎನ್ನಲಾಗಿದೆ.

73 ವರ್ಷ ವಯಸ್ಸಿನ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ‌ ಅವರೊಂದಿಗೆ ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ಜನವರಿ 18ರ ವರೆಗೆ ನಡೆಯುವ ಈ ಪಾದಯಾತ್ರೆಗೆ ಇಂದು ಕನಕಪುರ ತಾಲ್ಲೂಕಿನ ಕಾವೇರಿ ತಟ, ಸಂಗಮದಲ್ಲಿ ಚಾಲನೆ ನೀಡಲಾಯಿತು.

“ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜ್ವರದಿಂದ ಬಳಲುತ್ತಿದ್ದಾರೆ. ನನಗೆ ಕಳವಳವಾಗುತ್ತಿದೆ. ಸಿದ್ದರಾಮಯ್ಯನವರೇ ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ಆರೋಗ್ಯ ರಕ್ಷಣೆ ಬಹಳ ಮಹತ್ವದ್ದು” ಎಂದು  ಸಚಿವ ಕಾರಜೋಳ ಟ್ವೀಟ್ ಮಾಡಿದ್ದಾರೆ.

You might also like
Leave a comment