This is the title of the web page

ಧಾರ್ಮಿಕ ಘೋಷಣೆ ಕೂಗಿದ ಆರು ಜನ ಪೊಲೀಸ ವಶಕ್ಕೆ

ಬೆಳಗಾವಿ, 17- ವಿದ್ಯಾರ್ಥಿನಿಯರಿಗೆ ಹಿಜಾಬದೊಂದಿಗೆ ತರಗತಿಗಳಿಗೆ ಪ್ರವೇಶ ನಿರಾಕರಿಸಿದ್ದರಿಂದ ಪ್ರತಿಭಟನೆ ಮಾಡಿದ ಅವರ ಸಂಬಂಧಿಕರು ಕಾಲೇಜು ಆವರಣದಲ್ಲಿ ಧಾರ್ಮಿಕ ಘೋಷಣೆ ಕೂಗಿದ್ದರಿಂದ ಪೊಲೀಸರು ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.

ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ದೊರೆಯದ್ದರಿಂದ ವಿಜಯಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ನ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜ್ ಆವರಣದಲ್ಲಿಯೇ ಸಮಯ ಕಳೆಯುತ್ತಿದ್ದರು. ಈ ವಿಷಯ ಗೊತ್ತಾಗಿ ಅವರ ಕುಟುಂಬದ ಸದಸ್ಯರು ಮತ್ತು ಪರಿಚಿತರು ಸ್ಥಳಕ್ಕೆ ಧಾವಿಸಿ ಕಾಲೇಜು ಸಿಬ್ಬಂದಿಯೊಂದಿಗೆ ಈ ಕುರಿತು ಪ್ರಶ್ನಿಸಿದರು.

ನ್ಯಾಯಾಲಯ ಮತ್ತು ಸರಕಾರದ ಆದೇಶದಂತೆ ವಿದ್ಯಾರ್ಥಿನಿಯರು ಕಾಲೇಜು ಆವರಣದಲ್ಲಿ ಹಿಜಾಬ್ ಮತ್ತು ಬುರ್ಖಾ ಧರಿಸಬಹುದು. ಆದರೆ ತರಗತಿಗೆ ಯುನಿಫಾರ್ಮ್ ನಲ್ಲಿ ಮಾತ್ರ ಬರಬೇಕು ಎಂದು ತಿಳಿಸಿದರು. ಆಗ ವಾಗ್ವಾದ ನಡೆದು ಕೆಲವರು “ಅಲ್ಲಾಹು ಅಕ್ಬರ್” ಘೋಷಣೆ ಕೂಗಿದರು.

ಆಗ ಪೊಲೀಸರು ಘೋಷಣೆ ಕೂಗಿದ ಆರು ಜನರನ್ನು ವಶಕ್ಕೆ ಪಡೆದು, ಉಳಿದವರನ್ನು ಆವರಣದ ಹೊರಗೆ ಕಳುಹಿಸಿ ಪರಸ್ಥಿತಿ ಶಾಂತಗೊಳಿಸಿದರು.

ವಿದ್ಯಾರ್ಥಿನಿಯರು ಮಾತ್ರ ತಾವು ಯಾವುದೇ ಕಾರಣಕ್ಕೂ ಹಿಜಾಬ್ ಇಲ್ಲದೇ ತರಗತಿ ಪ್ರವೇಶಿಸುವದಿಲ್ಲ ಎಂದು ಪಟ್ಟು ಹಿಡಿದ್ದಿದ್ದಾರೆ.

You might also like
Leave a comment