This is the title of the web page

ಎಸ್ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬಂದ ಆರು ನಕಲಿ ವಿದ್ಯಾರ್ಥಿಗಳು ವಶಕ್ಕೆ

 

ಚಿಕ್ಕೋಡಿ, ೨೮- ಇಂದು ಆರಂಭವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆಗೆ ಹಾಜರಾಗಿದ್ದ ಬೇರೆ ಆರು ಜನರನ್ನು ಚಿಕ್ಕೋಡಿ ಪಟ್ಟಣದಲ್ಲಿ ವಶಕ್ಕೆ ಪಡೆಯಲಾಗಿದೆ.

ಚಿಕ್ಕೋಡಿ ಪಟ್ಟಣದ ಆರ್ ಡಿ ಕಾಲೇಜಿನಲ್ಲಿ ಸೋಮವಾರ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಐವರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿ ಬಾಹ್ಯ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಆಗಮಿಸಿದ್ದರು. ಈ ವೇಳೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಲ್ ಟಿಕೇಟ್ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಗೋಕಾಕ ತಾಲೂಕಿನ ಘೋಡಗೇರಿ ಗ್ರಾಮದ ರಾಹುಲ್ ಕಿಳ್ಳಿಕೇತರ, ಕೊಂಕಣಿವಾಡಿಯ ಭೀಮಶಿ ಹುಲಕುಂದ, ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಕೊಪ್ಪ ಎಸ್‍.ಕೆ. ಗ್ರಾಮದ ಕಾರ್ತಿಕ ಲಚ್ಚಪ್ಪ ಜಿಕುಂಬಾರ, ಚಿಕಾಲಕೊಪ್ಪ ಗ್ರಾಮದ ಸಿದ್ದು ಮಾದೇವ ಜೋಗಿ, ಗಿರಸಾಗರ ಗ್ರಾಮದ ಮಹಾಂತೇಶ ಸಂಗಪ್ಪ ಡೊಳ್ಳಿನವರ, ಬಾಗಲಕೋಟ ಜಿಲ್ಲೆಯ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಸವಿತಾ ಮಾದೇವ ಹೊಸೂರು ಹೀಗೆ ಆರು ಜನರು ಬೇರೆಯವರ ಬದಲಾಗಿ ಪರೀಕ್ಷೆ ಬರೆಯಲು ಆಗಮಿಸಿದ್ದರು. ಈ ಆರು ಜನರನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.

You might also like
Leave a comment