Please assign a menu to the primary menu location under menu

Local News

೧೩೭ ವರ್ಷ ಪೂರೈಸಿದ ಕಲ್ಲೊಳ್ಳಿ ಶಾಲೆಯಲ್ಲಿ ಸ್ಮಾರ್ಟ ಕ್ಲಾಸ್ ನಿರ್ಮಾಣ 


ಕಲ್ಲೊಳ್ಳಿ: ಸರಕಾರಿ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಲು ಸ್ಮಾರ್ಟ ಕ್ಲಾಸ್ ಗಳಂತಹ ಯೋಜನೆಗಳು ಪೂರಕವಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಕಲ್ಲೊಳ್ಳಿ ಪಟ್ಟಣದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ನಡೆದ 2020-21ನೇ ಸಾಲಿನ ರಾಜ್ಯಸಭಾ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗಿರುವ ಸ್ಮಾರ್ಟ ಕ್ಲಾಸ್ ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, 137 ವರ್ಷಗಳನ್ನು ಪೂರೈಸಿರುವ ಕಲ್ಲೋಳಿಯ ನಮ್ಮೂರ ಶಾಲೆಗೆ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸ್ಮಾರ್ಟ ಕ್ಲಾಸ್ ಗಳನ್ನು ಮತ್ತು ಶಾಲೆಗೆ ಬೇಕಾಗಿರುವ ಆಸನ ಮತ್ತು ಕಂಪ್ಯೂಟರ್ ನಂತಹ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ನಾನು ಕಲಿತಿರುವ ಶಾಲೆಯ ಋಣವನ್ನು ತೀರಿಸುವ ಅವಕಾಶ ಒದಗಿ ಬಂದಿರುವುದು ನನ್ನ ಸೌಭಾಗ್ಯ ಎಂದರು.

ಅರಭಾವಿ ಮತಕ್ಷೇತ್ರದಲ್ಲಿ ಪ್ರಸಕ್ತ ಸಾಲಿನಲ್ಲಿ 5 ಶಾಲೆಗಳಿಗೆ ಸ್ಮಾರ್ಟ ಕ್ಲಾಸ್  ನಿರ್ಮಿಸಲು ಅನುದಾನವನ್ನು ನೀಡಲಾಗಿದೆ. ನನ್ನ ಮನವಿಯ ಮೇರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕಂಪನಿಯು ಸಾಮಾಜಿಕ ಜವಾಬ್ದಾರಿಯ ಅನುದಾನದಡಿಯಲ್ಲಿ ಕಲ್ಲೋಳಿ, ತುಕ್ಕಾನಟ್ಟಿ, ರಾಜಾಪೂರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು 1000 ಡೆಸ್ಕ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ 40 ಗಣಕಯಂತ್ರಗಳನ್ನು ನೀಡಲಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸದರಾದ ಈರಣ್ಣ ಕಡಾಡಿ ಅವರು ನೀಡಿದಂತಹ ಅನುದಾನವನ್ನು ಶಾಲೆಯ ಮಕ್ಕಳಿಗೆ ಸದುಪಯೋಗ ಪಡಿಸಿಕೊಳ್ಳಲು ಶಿಕ್ಷಕರೂ ಪ್ರಯತ್ನಿಸಬೇಕೆಂದರು. ಸಂಸದರ ತಂದೆ ಭೀಮಪ್ಪಾ ಕಡಾಡಿ ಅವರು ಗ್ರಾಮ ಪಂಚಾಯತ ಹಾಗೂ ಪಿ.ಕೆ.ಪಿ.ಎಸ್ ಅಧ್ಯಕ್ಷರಿದ್ದಾಗ 6 ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದರು ಎಂದು ಸ್ಮರಿಸಿದರು.

ತಹಶೀಲ್ದಾರ ಡಿ.ಜಿ ಮಹಾತ, ಮೂಡಲಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಚಿನ್ನಪ್ಪನವರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ, ರಾವಸಾಬ ಬೆಳಕೂಡ, ಬಸವರಾಜ ಕಡಾಡಿ, ಹಣಮಂತ ಸಂಗಟಿ, ಧರೆಪ್ಪ ಖಾನಗೌಡ್ರ, ಮಹಾದೇವ ಮಧಬಾಂವಿ, ಪ್ರಭು ಕಡಾಡಿ, ಶಿವಪ್ಪ ಬಿ.ಪಾಟೀಲ, ಶಿವಾನಂದ ಹೆಬ್ಬಾಳ, ಅಡಿವೆಪ್ಪ ಕುರಬೇಟ, ಹಣಮಂತ ಕೌಜಲಗಿ, ಮಲ್ಲಪ್ಪ ಹೆಬ್ಬಾಳ, ತುಕಾರಾಮ ಪಾಲ್ಕಿ, ರಾಮಲಿಂಗ ಬಿ.ಪಾಟೀಲ, ಸಿದ್ದು ಮರಡಿ, ಅಶೋಕ ಆಡಿನವರ, ಬಸಗೊಂಡ ಖಾನಾಪೂರ, ಹಣಮಂತ ಹೊನ್ನಳ್ಳಿ, ಶಿವನಿಂಗ ಕುಂಬಾರ, ಹಣಮಂತ ಪಾಲಭಾವಿ, ಅಜೀತ ಚಿಕ್ಕೋಡಿ, ಬಸವರಾಜ ದಾಸನಾಳ, ಸಂತೋಷ ಕಬಾಡಗಿ, ಈರಣ್ಣ ಮುನ್ನೋಳಿಮಠ, ಪ್ರಧಾನ ಗುರುಗಳಾದ ಚಿದಾನಂದ ಬಡಿಗೇರ, ಬಿ.ಆರ.ಸಿ ಗಣಪತಿ ಉಪ್ಪಾರ, ಎಸ್.ಎಸ್. ನಾಯಕವಾಡಿ ಸೇರಿದಂತೆ ಶಿಕ್ಷಕರು, ಪಾಲಕರು ಕಾರ್ಯಕರ್ತರು ಉಪಸ್ಥಿತರಿದ್ದರು.


Samadarshi News

Leave a Reply