Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Feature Article

ಅ.25 ರಂದು ನಡೆಯಲಿರುವ ʼಸೂರ್ಯಗ್ರಹಣʼ ಕುರಿತು ಇಲ್ಲಿದೆ ಮಾಹಿತಿ


ನವದೆಹಲಿ: ಇದೇ ತಿಂಗಳ 25ರಂದು ಸೂರ್ಯಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಇದು ಭಾಗಶಃ ಮಾತ್ರ ಗೋಚರಿಸುತ್ತದ್ದು ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿದೆ.

ಭಾರತದಲ್ಲಿ ಗೋಚರಿಸುವ ಏಕೈಕ ಭಾಗಶಃ ಸೂರ್ಯಗ್ರಹಣ ಇದಾಗಿದ್ದು, ಈ ಸೂರ್ಯಗ್ರಹಣ ಬಿಟ್ಟರೆ ಇನ್ನು ಇಂಥ ಸೂರ್ಯಗ್ರಹಣ ನಡೆಯುವುದು 2032ರಲ್ಲಿ. ಮುಂದಿನ ಭಾಗಶಃ ಸೂರ್ಯಗ್ರಹಣವು ಮಾರ್ಚ್ 29, 2025 ರಂದು ಸಂಭವಿಸಿದರೂ ಅದು ಭಾರತದಲ್ಲಿ ಗೋಚರಿಸುವುದಿಲ್ಲ.

ಭಾಗಶಃ ಸೂರ್ಯಗ್ರಹಣ ಎಂದರೇನು ?

ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ನಡೆಯುವುದು ಅಮವಾಸ್ಯೆಯಂದು. ಚಂದ್ರನು ಸೂರ್ಯನ ಸಂಪೂರ್ಣ ಮೇಲ್ಮೈ ಪ್ರದೇಶವನ್ನು ಆವರಿಸದಿದ್ದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ.

ಚಂದ್ರನು, ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸೂರ್ಯನ ಕಿರಣವು ಭೂಮಿಗೆ ಬೀಳಲು ತಡೆಯಾಗುತ್ತದೆ. ಈ ಸಂದರ್ಭದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು ಸೂರ್ಯಗ್ರಹಣ ಸಂಭವಿಸುತ್ತದೆ. ಕೆಲವೊಮ್ಮೆ ಪೂರ್ತಿಯಾಗಿ ಸೂರ್ಯನಿಗೆ ಚಂದ್ರ ಅಡ್ಡ ಬಂದರೆ ಕೆಲವು ಬಾರಿ ಭಾಗಶಃ ಅಡ್ಡ ಬರುತ್ತಾನೆ. ಈ ಬಾರಿ ಕೂಡಾ ಭಾಗಶಃ ಸೂರ್ಯಗ್ರಹಣ ನಡೆಯುತ್ತಿದೆ.

ಸೂರ್ಯ ಗ್ರಹಣದ ವೇಳೆ ಯಾವುದು ?

ಸೂರ್ಯ ಗ್ರಹಣವು ಅಕ್ಟೋಬರ್ 25, 2022 ರಂದು 08:58 am UTC (02:28 pm IST) ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅದೇ ದಿನ 1:00 pm UTC (06:32 pm IST) ವರೆಗೆ ಇರುತ್ತದೆ. ಆ ದಿನದಂದು ಗರಿಷ್ಠ ಗ್ರಹಣವು ಸುಮಾರು 11:00 am UTC (04:30 pm IST) ಕ್ಕೆ ಸಂಭವಿಸುತ್ತದೆ.

ಸೂರ್ಯಗ್ರಹಣ ಗೋಚರಿಸುವ ಸ್ಥಳಗಳು

ಸೂರ್ಯಗ್ರಹಣವು ಯುರೋಪ್, ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಉರಲ್ ಪರ್ವತಗಳು, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯದಿಂದ ಗೋಚರಿಸುತ್ತದೆ. ಈ ಗ್ರಹಣದ ಗರಿಷ್ಠ ಹಂತವು ರಷ್ಯಾದ ಪಶ್ಚಿಮ ಸೈಬೀರಿಯನ್ ಬಯಲು ಪ್ರದೇಶವಾಗಿದೆ.


Leave a Reply