This is the title of the web page

ಜಾತ್ರೆ, ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ -ಶ್ರೀರಾಮ ಸೇನೆ

 

ಬೆಳಗಾವಿ, ೨೪- ಮುಸ್ಲಿಮ ವ್ಯಾಪಾರಿಗಳಿಗೆ ರಾಜ್ಯದ ಯಾವುದೇ ಹಿಂದೂ ಜಾತ್ರೆ ಮತ್ತು ದೇವಸ್ಥಾನಗಳ ಆವರಣದಲ್ಲಿ ವ್ಯಾಪಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸವದತ್ತಿಯ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿರುವ ಮುಸ್ಲಿಮರ ಎಲ್ಲ ವ್ಯಾಪಾರ ವ್ಯವಹಾರಗಳನ್ನು ಶ್ರೀರಾಮ ಸೇನೆ ತಡೆಯಲಿದ್ದು ಇದಕ್ಕಾಗಿ ಬಲಪ್ರಯೋಗ ಮಾಡಲೂ ಸಿದ್ಧ ಎಂದು ಹೇಳಿದರು.

ಮಂಗಳೂರಿನ ಕಾಪು ಜಾತ್ರೆಯಲ್ಲಿ ಮುಸ್ಲಿಮ ವ್ಯಾಪಾರಿಗಳಿಗೆ ಅನುಮತಿಯಿಲ್ಲ ಎಂಬ ನಿರ್ಧಾರ ಇಡೀ ರಾಜ್ಯಕ್ಕೆ ಹಬ್ಬುತ್ತಿದೆ. ಇನ್ನು ಮುಂದೆ ಮುಸ್ಲಿಮ ವ್ಯಾಪಾರಿಗಳಿಗೆ ರಾಜ್ಯದ ಯಾವುದೇ ಹಿಂದು ಜಾತ್ರೆ, ದೇವಸ್ಥಾನಗಳ ಆವರಣದಲ್ಲಿ ವ್ಯಾಪಾರಕ್ಕೆ ಶ್ರೀರಾಮ ಸೇನೆ ಅನುಮತಿ ನೀಡುವುದಿಲ್ಲ. ಮುಸ್ಲಿಮರ ಎಲ್ಲ ವ್ಯಾಪಾರ ವ್ಯವಹಾರಗಳನ್ನು ಶ್ರೀರಾಮ ಸೇನೆ ತಡೆಯಲಿದೆ ಎಂದು ಮುತಾಲಿಕ ಹೇಳಿದರು.

ಜಾತ್ರೆ, ದೇವಸ್ಥಾನದ ಆವರಣಗಳಲ್ಲಿ ಮುಸ್ಲಿಮ ವ್ಯಾಪಾರಿಗಳ ವಿರುದ್ಧ ಆರ್ಥಿಕ ಬಹಿಷ್ಕಾರ ಪ್ರಾರಂಭವಾಗಿದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವದು. ಎಲ್ಲಿಯ ವರೆಗೆ ಮುಸ್ಲಿಮರ ಮನಸ್ಥಿತಿ ಬದಲಾಗುವದಿಲ್ಲವೋ ಮತ್ತು ಗೋಹತ್ಯೆ, ಗೋಮಾಂಸ ತಿನ್ನುವದನ್ನು ಬಿಡುವದಿಲ್ಲವೋ ಅಲ್ಲಿಯವರೆಗೆ ಅವರ ವಿರುದ್ಧ ‘ಆರ್ಥಿಕ ಬಹಿಷ್ಕಾರ’ ಮುಂದುವರೆಯಲಿದೆ ಎಂದು ಅವರು ಹೇಳಿದರು.

ಮುಸ್ಲಿಮರ ಸಿದ್ಧಾಂತ ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗಿದೆ. ಮುಸ್ಲಿಮ ಸಮುದಾಯದ ಮನಸ್ಥಿತಿ ಬದಲಾಗುವವರೆಗೂ ಅವರೊಂದಿಗೆ ವ್ಯಾಪಾರ ವ್ಯವಹಾರ ನಡೆಸದಿರುವ ಹಿಂದು ಸಂಘಟನೆಗಳ ನಿರ್ಧಾರವನ್ನು ಶ್ರೀರಾಮ ಸೇನೆ ಬೆಂಬಲಿಸಲಿದೆ ಎಂದು ಪ್ರಮೋದ ಮುತಾಲಿಕ ಹೇಳಿದರು.

ಕಾಲೇಜಗಳ ಹಿಜಾಬ್ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದವರು ಮುಸ್ಲಿಮರೇ. ಆದರೂ ನ್ಯಾಯಾಲಯದ ತೀರ್ಪುನ್ನು ಒಪ್ಪುತ್ತಿಲ್ಲದಿರುವದು ವಿಪರ್ಯಾಸ ಎಂದು ಅವರು ಹೇಳಿದರು.

You might also like
Leave a comment