This is the title of the web page

ಜಾತ್ರೆಗಳಿಗೆ ಅನುಮತಿ ನೀಡಲು ಆಗ್ರಹಿಸಿ ಶ್ರೀರಾಮ ಸೇನೆ ಪ್ರತಿಭಟನೆ

ಧಾರವಾಡ ಫೆ.04- ದೇವಸ್ಥಾನ, ಮಠ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಜಾತ್ರಾ ಮಹೋತ್ಸವಗಳಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಶ್ರೀರಾಮ ಸೇನೆ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಠ-ಮಂದಿರಗಳಲ್ಲಿ ಜಾತ್ರಾ ಮಹೋತ್ಸವಕ್ಕೆ ಅವಕಾಶವಿರಲಿಲ್ಲ. ಆದರೆ ಈ ವರ್ಷ ಕೋವಿಡ್ ನ ಎಲ್ಲ ನಿರ್ಬಂಧಗಳನ್ನು ಸರ್ಕಾರ ಹಿಂತೆಗೆದುಕೊಂಡಿದೆ. ಆದರೆ ದೇವಸ್ಥಾನ , ಮಠಗಳ ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡದಿರುವುದು ನೋವಿನ ಸಂಗತಿ. ಸೌಹಾರ್ದತೆ, ಏಕತೆ, ಜೊತೆ ಧಾರ್ಮಿಕತೆಯ ಹೆಗ್ಗುರುತು ಈ ಜಾತ್ರಾ ಮಹೋತ್ಸವಗಳು ಎನ್ನುವದನ್ನ ಸರ್ಕಾರ ಅರಿಯಬೇಕು ಎಂದಿದ್ದಾರೆ.

ಈ ಜಾತ್ರೆ. ಉತ್ಸವಗಳು ರೈತರ, ಕಲಾವಿದರ, ವ್ಯಾಪಾರಿಗಳ, ಹೂ-ಹಣ್ಣು ಮುಂತಾದವರಿಗೆ ವರ್ಷದ ಆದಾಯ ಮೂಲವಿದ್ದು ಅವರ ಹೊಟ್ಟೆ ಮೇಲೆ ಹೊಡೆದಂತೆ ಹಾಗೂ ಅವರ ಜೀವನ ದುಸ್ತರವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿಯಂತೆಯೇ ಜಾತ್ರಾ ಮಹೋತ್ಸವ ಜರುವುಗುವಂತೆ  ತಾವು ತಕ್ಷಣವೇ ಜಾತ್ರಾ ಮಹೋತ್ಸವಗಳಿಗೆ ಇರುವ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಲಾಗಿದೆ.

ಶ್ರೀರಾಮ ಸೇನಾದ ಜಿಲ್ಲಾಧ್ಯಕ್ಷರಾದ ಅಣ್ಣಪ್ಪದಿವಟಗಿ, ಪ್ರಮುಖರಾದ ಪಾಂಡು ಯಮೋಜಿ, ವಿಶ್ವಾಸ ನಾಗಶೆಟ್ಟಿ, ಬಸು ದುರ್ಗದ, ಮೈಲಾರ ಗುಡ್ಡಪ್ಪನವರ, ಹಣಮಂತ, ಮಂಜು ಕಾಟ್ಕರ, ಚಿದು ಕಲಾಲ ಮುಂತಾದವರು ಭಾಗವಹಿಸಿದ್ದರು.

You might also like
Leave a comment