This is the title of the web page

ಎಸ್.ಎಸ್.ಎಲ್.ಸಿ.; ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ಹೆಚ್ಚು ಆಯ್ಕೆಗಳು

ಬಾಗಲಕೋಟ, ೨೭(ಸಮದರ್ಶಿ ಸುದ್ದಿ)- ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಈಗ ಮುಗಿದಿರುವ ಶೇಕಡಾ 80 ರಷ್ಟು ಸಿಲಾಬಸ್​ನಲ್ಲಿಯೇ ಪ್ರಶ್ನೆ ಪತ್ರಿಕೆ ಬರುತ್ತದೆ. ಈ ಸಾರಿ ಪ್ರಶ್ನೆ ಪತ್ರಿಕೆಯಲ್ಲಿ ಹೆಚ್ಚು ಆಯ್ಕೆಗಳನ್ನು ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ ಹೇಳಿದ್ದಾರೆ.

ಈ ಬಗ್ಗೆ ನಗರದಲ್ಲಿ ಹೇಳಿಕೆ ನೀಡಿರುವ ಅವರು, ಪಠ್ಯ ಮುಗಿಯದೇ ಇರುವ ಶಾಲೆಯ ವಿದ್ಯಾರ್ಥಿಗಳಿಗೆ ಬೇರೆ ಪ್ರಶ್ನೆ ಆಯ್ಕೆ‌ ಮಾಡುವ ಅವಕಾಶ ಇರುತ್ತದೆ. ಹಾಗಾಗಿ ಧೈರ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಿರಿ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಆಡಳಿತಾತ್ಮಕವಾಗಿ ಸರ್ಕಾರ ಸಮವಸ್ತ್ರದ ಆದೇಶ ಮಾಡಿದೆ. ಈ ಆದೇಶ ಪಾಲನೆ ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ. ಪರೀಕ್ಷೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ಪಠ್ಯದಲ್ಲಿ ಶೇ.20 ರಷ್ಟು ಕಡಿತ ಮಾಡಲಾಗಿದೆ. ಶೇ.80 ರಷ್ಟು ಪಠ್ಯಕ್ಕೆ ಮಾತ್ರ ಪರೀಕ್ಷೆ ನಡೆಯಲಿದೆ ಎಂದು ನಾಗೇಶ ಹೇಳಿದರು.

20 ಇಂಟರ್ನಲ್ಸ ಅಂಕಗಳಿದ್ದು 80 ಅಂಕಗಳಿಗೆ ಮಾತ್ರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಹಾಲ್ ಟಿಕೆಟ್ ಸಂಬಂಧ ಯಾವುದೇ ದೂರು ಬಂದಿಲ್ಲ. ಮಕ್ಕಳಿಗೆ ಹಾಲ್ ಟಿಕೆಟ್ ಕೊಡದಿರುವ ಸಂಬಂಧ ಯಾವುದೇ ದೂರು ಬಂದಿಲ್ಲ ಎಂದು ಕರ್ನಾಟಕ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎಚ್ ಎನ್ ಗೋಪಾಲಕೃಷ್ಣ ಹೇಳಿದ್ದಾರೆ.

You might also like
Leave a comment