This is the title of the web page

ತಂಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಇರಿದ ಸಹೋದರರು

 

ಹುಬ್ಬಳ್ಳಿ, ೨೪- ವಿವಾಹವಾಗಿದ್ದ ತಮ್ಮ ತಂಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಆಕೆಯ ಸಹೋದರರು ಚೂರಿಯಿಂದ ಇರಿದು ಹತ್ಯೆ ಮಾಡಲು ಯತ್ನಿಸಿದ ಘಟನೆ ನಿನ್ನೆ ಗುರುವಾರ ರಾತ್ರಿ ಹಳೆ ಹುಬ್ಬಳ್ಳಿಯಲ್ಲಿ ಸಂಭವಿಸಿದೆ.

ಪತಿಯನ್ನು ತೊರೆದು ತವರು ಮನೆಯಲ್ಲಿ ವಾಸವಾಗಿದ್ದ ತಮ್ಮ ತಂಗಿ ಯುವಕನೊಬ್ಬನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಗೊತ್ತಾದ ನಂತರ ಆಕೆಯ ಸಹೋದರರಾದ ಕಿರಣ ಮತ್ತು ಅಭಿ ಇಬ್ಬರಿಗೂ ದೂರವಿರುವಂತೆ ಎಚ್ಚರಿಕೆ ನೀಡಿದ್ದರೂ ಸಹ ಇಬ್ಬರೂ ಸಂಬಂಧ ಮುಂದುವರೆಸಿದ್ದರು ಎನ್ನಲಾಗಿದೆ.

ತಂಗಿಯ ಅಕ್ರಮ ಸಂಬಂಧದಿಂದ ಸಾಮಾಜಿಕವಾಗಿ ಅವಮಾನಿತರಾದ ಕಿರಣ ಮತ್ತು ಅಭಿ ನಿನ್ನೆ ಸಂಜೆ ಹಳೆ ಹುಬ್ಬಳ್ಳಿಯಲ್ಲಿ ಆಕೆಯ ಪ್ರಿಯಕರನನ್ನು ತಡೆದು ಚೂರಿಯಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆ ಯುವಕನನ್ನು ಪೊಲೀಸರು ಕಿಮ್ಸ ಆಸ್ಪತ್ರೆಗೆ ದಾಖಲಿಸಿದ್ದಾರೆ.

You might also like
Leave a comment