This is the title of the web page

ಕೆಲ ಶಾಲೆ ಹೊರತುಪಡಿಸಿ ಸೋಮವಾರದಿಂದ ಮತ್ತೆ ಶಾಲೆ ಆರಂಭ

ಬೆಳಗಾವಿ, 15- ‘ಕೊರೋನಾ ರಜೆ’ ಯ ನಂತರ ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರದಿಂದ ಶಾಲೆಗಳು ಪುನಾರಂಭಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಶಾಲೆಯಲ್ಲಿ ಶೇ.10ಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಕಂಡು ಬರುತ್ತವೆಯೋ ಆ ಶಾಲೆಗಳಿಗೆ ಮಾತ್ರ ರಜೆ ನೀಡಲಾಗುವುದು. ಇತರ ಶಾಲೆಗಳು ಎಂದಿನಂತೆ ನಡೆಯಲಿವೆ. ರಾಜ್ಯ ಸರ್ಕಾರದ ಆದೇಶದಂತೆ ಪೂರ್ಣ ತಾಲೂಕು, ಜಿಲ್ಲೆಗೆ ರಜೆ ಘೋಷಿಸುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಜ.11ರಿಂದ ಒಂದು ವಾರ ಜಿಲ್ಲೆಯ 1ರಿಂದ 9ನೇ ತರಗತಿ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.

ಕಿತ್ತೂರು ಸೈನಿಕ ಶಾಲೆ, ಅಥಣಿ ತಾಲೂಕಿನ ಯಂಕಂಚಿ ಪ್ರೌಢಶಾಲೆ, ನಿಪ್ಪಾಣಿಯ ಕೆಎಲ್‍ಇ ಕಾಲೇಜು ಬಿಟ್ಟು ಇನ್ನುಳಿದ ಎಲ್ಲ ಶಾಲೆಗಳು ಸೋಮವಾರದಿಂದ ಕಾರ್ಯ ನಿರ್ವಹಿಸಲಿವೆ.

You might also like
Leave a comment