This is the title of the web page

ರಾಜ್ಯ ಮುಂಗಡಪತ್ರ : ಯಾವ ಇಲಾಖೆಗೆ ಎಷ್ಟು ಅನುದಾನ…

ಬೆಂಗಳೂರು, 4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ 2022-2023ನೇ ಸಾಲಿನ ರಾಜ್ಯ ಮುಂಗಡಪತ್ರ ಮಂಡನೆ ಮಾಡಿದ್ದು, ಎಲ್ಲಾ ಇಲಾಖೆಗಳಿಗೆ ಅನುದಾನವನ್ನು ಘೋಷಣೆ ಮಾಡಿದ್ದಾರೆ.

ಈ ಬಾರಿ 2,53,165 ಕೋಟಿ ರೂ. ಮುಂಗಡಪತ್ರದ​ ಮಂಡನೆ ಆಗಿದ್ದು, ಇದು ಕಳೆದ ಬಾರಿಗಿಂತ ಶೇಕಡಾ 7.7 ಹೆಚ್ಚು.

ರಾಜ್ಯದ ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ – ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವ ವಲಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ ಎಂಬ ವಿವರ ಇಲ್ಲಿದೆ :

ಶಿಕ್ಷಣ ಇಲಾಖೆ – 31,980 ಕೋಟಿ ರೂಪಾಯಿ
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ‌ ರಾಜ್‌ ಇಲಾಖೆ – 17,325 ಕೋಟಿ ರೂಪಾಯಿ
* ಕಂದಾಯ ಇಲಾಖೆ – 16,388 ಕೋಟಿ ರೂಪಾಯಿ
* ಇಂಧನ ಇಲಾಖೆ – 12,655 ಕೋಟಿ ರೂಪಾಯಿ
* ವಸತಿ ಇಲಾಖೆ – 3,594 ಕೋಟಿ ರೂಪಾಯಿ
* ಕೃಷಿ ಮತ್ತು ತೋಟಗಾರಿಕೆ ಇಲಾಖೆ – 8,457 ಕೋಟಿ ರೂ
* ಲೋಕೋಪಯೋಗಿ ಇಲಾಖೆ – 10,447 ಕೋಟಿ ರೂ
* ಜಲ ಸಂಪನ್ಮೂಲ ಇಲಾಖೆ – 20,601 ಕೋಟಿ ರೂ
* ನಗರಾಭಿವೃದ್ಧಿ ಇಲಾಖೆ – 16,076 ಕೋಟಿ ರೂಪಾಯಿ
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 13,982 ಕೋಟಿ ರೂಪಾಯಿ
* ಆಹಾರ ಇಲಾಖೆ – 2,288 ಕೋಟಿ ರೂಪಾಯಿ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 4,713 ಕೋಟಿ
* ಸಮಾಜ ಕಲ್ಯಾಣ ಇಲಾಖೆ – 9,389 ಕೋಟಿ ರೂ
* ಒಳಾಡಳಿತ ಮತ್ತು ಸಾರಿಗೆ ಇಲಾಖೆ – 11,222 ಕೋಟಿ ರೂ.

ಅದರಂತೆ:

ರಾಜ್ಯಗಳ ಕೆರೆಗಳ ಅಭಿವೃದ್ದಿಗೆ 500 ಕೋಟಿ ರೂ,

ತಾಲೂಕುಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ

ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ 8409 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ.

You might also like
Leave a comment