This is the title of the web page

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಹೇಳಿಕೆ; ಮಠದ ಮೇಲೆ ಕಲ್ಲು ತೂರಾಟ

ಕಲಬುರ್ಗಿ, 31- ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾಯ್ದೆಗಳ ವಿರುದ್ಧ ಹೇಳಿಕೆ ನೀಡಿದ್ದ ಕೇದಾರ್ ಶ್ರೀಗಳ ನಡೆಯಿಂದ ಕುಪಿತರಾದ ಕೆಲವರು ಅಫಜಲಪುರ ತಾಲೂಕಿನ ಮಾಶಾಳ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಗುರುವಾರ ರಾತ್ರಿ ವೇಳೆ ಮಠದಲ್ಲಿ ಶ್ರೀಗಳು ಇದ್ದ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಡಿದ್ದಾರೆ. ಅಲ್ಲದೇ ಶ್ರೀಗಳ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಇದೇ 28 ರಂದು ಕಲಬುರ್ಗಿಯಲ್ಲಿ ಹಿಂದು ಜಾಗೃತಿ ಸೇನೆ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇದಾರ ಶ್ರೀಗಳು ಲವ್ ಜಿಹಾದ್, ಗೋ ಹತ್ಯೆ ನಿಷೇಧ ಕಾಯ್ದೆಗಳ ಬಗ್ಗೆ  ಮಾತನಾಡಿದ್ದರು. ಇದರಿಂದ ಕುಪಿತರಾದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಕಿಡಿಗೇಡಿಗಳು ಮಠದ ಕಿಟಕಿಗಳಿಗೆ ಕಲ್ಲು ತೂರಿ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ‌. ಮಠದ ಭಕ್ತರು ಮಾಹಿತಿ ನೀಡಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌‌ ನಡೆಸಿದರು.

You might also like
Leave a comment