This is the title of the web page

ಪುಂಡರ ವಿರುದ್ಧ ಕಠಿಣ ಕ್ರಮ

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಹುಬ್ಬಳ್ಳಿ, 18- ರಾಷ್ಟ್ರ ಭಕ್ತರಿಗೆ ಮಾಡುವ ಅವಮಾನವನ್ನು ಸರ್ಕಾರ ಎಂದಿಗೂ ಸಹಿಸುವದಿಲ್ಲ, ಸಮಾಜದ ಶಾಂತಿಯನ್ನು ಕೆದಕುವ ದುಷ್ಕರ್ಮಿಗಳನ್ನು ಸುಮ್ಮನೇ ಬಿಡುವದಿಲ್ಲ, ಪುಂಡರನ್ನು ಸದೆ ಬಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಪತ್ರಕರ್ತರ ಜೊತೆಗೆ ಅವರು ಮಾತನಾಡಿ, ಬೆಳಗಾವಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿರುವ ಪುಂಡಾಟಿಕೆಯ ಘಟನೆಯನ್ನು ಖಂಡಿಸುತ್ತೇನೆ. ಕಾನೂನು ಸುವ್ಯವಸ್ಥೆಗೆ ಯಾರೇ ಆಗಲಿ ಧಕ್ಕೆ ತಂದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಈಗಾಗಲೇ ಗೃಹ ಸಚಿವರಿಗೆ ತಿಳಿಸಿದ್ದು, ಈಗಾಗಲೇ ಕೆಲ ಕಿಡಿಗೇಡಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಸಣ್ಣ ಪುಟ್ಟ ವಿಚಾರದಲ್ಲಿ ಘಟನೆ ಮಾಡುವುದು, ಕಲ್ಲು ತೂರಾಟ ಮಾಡುವುದು, ಆಸ್ತಿ ಪಾಸ್ತಿಗೆ ಹಾನಿ ಮಾಡುವಂಥದ್ದು ಕಾನೂನು ಬಾಹಿರ. ಈ ರೀತಿ ಪುನಾವರ್ತನೆಯಾಗದಂತೆ ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ಸೂಚಿಸಿದ್ದೇನೆ ಎಂದರು.

ಇದು ದೇಶ ಭಕ್ತರ ಕೆಲಸವಲ್ಲ. ದೇಶಕ್ಕಾಗಿ ತ್ಯಾಗ ಮಾಡಿದವರ ಪ್ರತಿಮೆ ಇರುವುದು ಎಲ್ಲರೂ ಗೌರವಿಸುವುದರ ಸಲುವಾಗಿ, ಆ ಗೌರವ ಉಳಿಸುವ ಕೆಲಸ ಮಾಡಬೇಕು, ನಾಡಿನ ಹಿರಿಯರ, ತ್ಯಾಗ ಮಾಡಿದವರ ಗೌರವ ಉಳಿಸಬೇಕು. ಈ ರೀತಿ ಸಮಾಜದಲ್ಲಿ ಶಾಂತಿ ಕದಡುವುದು ಸರಿಯಲ್ಲ. ಸಮಾಜದಲ್ಲಿ ಕೆಲವೇ ಕೆಲವು ಪುಂಡರಿದ್ದಾರೆ. ಅವರನ್ನು ಸದೆಬಡೆಯುತ್ತೇವೆ ಎಂದು ಅವರು ಹೇಳಿದರು.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಇಂಥ ಘಟನೆ ನಡೆದಿರುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳನ್ನು ತನಿಖೆ ಮಾಡುವುದಾಗಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

You might also like
Leave a comment