Please assign a menu to the primary menu location under menu

National

ಹೋಮ್ ವರ್ಕ ಒತ್ತಡ; ವಿದ್ಯಾರ್ಥಿಯ ಆತ್ಮಹತ್ಯೆ 


ಚೆನ್ನೈ, ೨೫- : ಹೋಮ್ ವರ್ಕ ಒತ್ತಡ ಹೆಚ್ಚಾಗಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವುರ್ ಜಿಲ್ಲೆಯ ಪೆರಲಂನಲ್ಲಿ ಘಟನೆ ನಡೆದಿದೆ.

14 ವರ್ಷದ ಸಂಜಯ ಮೃತ ವಿದ್ಯಾರ್ಥಿಯಾಗಿದ್ದಾನೆ. ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆತನಿಗೆ ಹೋಮ್ ವರ್ಕ ಕಾರಣಕ್ಕೆ ಸಾಕಾಗಿ ಹೋಗಿತ್ತು ಎನ್ನಲಾಗಿದೆ. ಹೀಗಾಗಿ ಶಾಲೆಯನ್ನು ಬದಲಿಸುವಂತೆ ತನ್ನ ಪೋಷಕರಿಗೆ ಪದೇ ಪದೇ ಹೇಳುತ್ತಿದ್ದ ಎಂದು ತಿಳಿದು ಬಂದಿದೆ.

ಯಾವಾಗ ತನ್ನ ಪೋಷಕರು ಶಾಲೆ ಬದಲಿಸಲು ನಿರಾಕರಿಸಿದರೋ ಇನ್ನಷ್ಟು ಒತ್ತಡಕ್ಕೊಳಗಾದ ಸಂಜಯನು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆತನನ್ನು ತಿರುವುರ್ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Samadarshi News

Leave a Reply