This is the title of the web page

ಹಿಂಸಾಚಾರದ ಹೇಳಿಕೆ ನೀಡುವವರ ಬಗ್ಗೆ ಮಾತಾಡಿ -ಪ್ರಧಾನಿಗೆ ವಿದ್ಯಾರ್ಥಿ, ಶಿಕ್ಷಕರ ಪತ್ರ

ಹೊಸದಿಲ್ಲಿ, 8- ದೇಶದಲ್ಲಿ ಇತ್ತೀಚಿಗೆ ನಡೆಯುತ್ತಿರುವ ದ್ವೇಷದ ಭಾಷಣ ಮತ್ತು ಧರ್ಮ ಆಧಾರಿತ ಹಿಂಸಾಚಾರದ ಪ್ರಚೋದನೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ಹಾಗೂ ಈ ವಿಷಯದ ಬಗ್ಗೆ ಮಾತನಾಡುವಂತೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಗುಂಪು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದೆ.

“ದ್ವೇಷದ ಭಾಷಣ ಮತ್ತು ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ ನಡೆಸುವ ಬಹಿರಂಗ ಹೇಳಿಕೆಗಳ ಕುರಿತು ಪ್ರಧಾನಿಯವರ ಮೌನ ದ್ವೇಷ ತುಂಬಿದ ಧ್ವನಿಗಳಿಗೆ ಧೈರ್ಯ ತುಂಬುತ್ತಿದೆ” ಎಂದು ವಿದ್ಯಾರ್ಥಿಗಳು, ಅಧ್ಯಾಪಕರು ಪತ್ರದಲ್ಲಿ ಹೇಳಿದ್ದಾರೆ. ಬಹಿರಂಗ ಪತ್ರಕ್ಕೆ ಐಐಎಂ-ಅಹಮದಾಬಾದ ಮತ್ತು ಐಐಎಂ-ಬೆಂಗಳೂರಿನ 13 ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸೇರಿದಂತೆ 183 ಮಂದಿ ಸಹಿ ಮಾಡಿದ್ದಾರೆ.

ಇತ್ತೀಚಿಗೆ ಉತ್ತರಾಖಂಡದ ಹರಿದ್ವಾರದ ಧರ್ಮ ಸಂಸದ ಕಾರ್ಯಕ್ರಮದ ವೇಳೆ ನಡೆದ ದ್ವೇಷ ಭಾಷಣಗಳ ಹಿನ್ನೆಲೆಯಲ್ಲಿ ಪತ್ರ ಬರೆಯಲಾಗಿದೆ. ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಕೆಲವು ಹಿಂದೂ ಧಾರ್ಮಿಕ ಮುಖಂಡರು ಮುಸ್ಲಿಮರ ವಿರುದ್ಧ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದರು. ಜೊತೆಗೆ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದರು.

ಧರ್ಮ, ಜಾತಿ ಗುರುತುಗಳ ಆಧಾರದ ಮೇಲೆ ಸಮುದಾಯಗಳ ವಿರುದ್ಧ ದ್ವೇಷದ ಭಾಷಣಗಳು ಮತ್ತು ಹಿಂಸಾಚಾರಕ್ಕೆ ಕರೆ ನೀಡುವುದು ಸ್ವೀಕಾರಾರ್ಹವಲ್ಲ. ಭಾರತೀಯ ಸಂವಿಧಾನವು ಗೌರವಯುತವಾಗಿ ಧರ್ಮವನ್ನು ಆಚರಿಸುವ ಹಕ್ಕನ್ನು ಎಲ್ಲ ನಾಗರಿಕರಿಗೆ ನೀಡಿದ್ದರೂ ಸಹ ದೇಶದಲ್ಲಿ ಭಯದ ವಾತಾವರಣ ನಿರ್ಮಿಸಲಾಗುತ್ತಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

“ನಮ್ಮ ದೇಶದಲ್ಲಿ ಈಗ ಭಯದ ವಾತಾವರಣವಿದೆ. ಇತ್ತೀಚಿನ ದಿನಗಳಲ್ಲಿ ಚರ್ಚ್‌ಗಳು ಸೇರಿದಂತೆ ಪೂಜಾ ಸ್ಥಳಗಳನ್ನು ಧ್ವಂಸ ಮಾಡಲಾಗುತ್ತಿದೆ. ಮುಸ್ಲಿಂ ಸಹೋದರ ಸಹೋದರಿಯರ ವಿರುದ್ಧ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಲಾಗುತ್ತಿದೆ. ಇದೆಲ್ಲವನ್ನೂ ಯಾವುದೇ ಭಯವಿಲ್ಲದೆ, ನಿರ್ಭಯದಿಂದ ಮಾಡಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಐವರು ಪ್ರಾಧ್ಯಾಪಕರು ಈ ಪತ್ರವನ್ನು ರಚಿಸಿದ್ದಾರೆ. ಐಐಎಂನ ಅಧ್ಯಾಪಕ ಪ್ರತೀಕ ರಾಜ್ (ಸಹಾಯಕ ಪ್ರಾಧ್ಯಾಪಕ ಸ್ಟ್ರಾಟಜಿ), ದೀಪಕ ಮಾಲ್ಘಾನ್ (ಸಹ ಪ್ರಾಧ್ಯಾಪಕರು, ಸಾರ್ವಜನಿಕ ನೀತಿ), ದಾಲ್ಹಿಯಾ ಮಣಿ (ಸಹ ಪ್ರಾಧ್ಯಾಪಕರು, ‌ಉದ್ಯಮಶೀಲತೆ), ರಾಜಲಕ್ಷ್ಮಿ ವಿ ಮೂರ್ತಿ (ಸಹ ಪ್ರಾಧ್ಯಾಪಕರು, ಡಿಸಿಷನ್ ಸೈನ್ಸ್), ಹೇಮಾ ಸ್ವಾಮಿನಾಥನ್ (ಸಹ ಪ್ರಾಧ್ಯಾಪಕರು, ಸಾರ್ವಜನಿಕ ನೀತಿ) ಇವರ ಜೊತೆಗೆ ಪ್ರಮುಖ ಪರಿಸರ ಅರ್ಥಶಾಸ್ತ್ರಜ್ಞರಾದ ಮಾಲ್ಘಾನ್ ಕೂಡ ಸೇರಿದ್ದಾರೆ.

ಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಗುಂಪು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದೆ.

“ದ್ವೇಷದ ಭಾಷಣ ಮತ್ತು ಜಾತಿ ಆಧಾರಿತ ಹಿಂಸಾಚಾರ ವಿಷಯಗಳ ಬಹಿರಂಗ ಹೇಳಿಕೆಗಳ ಕುರಿತು ಪ್ರಧಾನಿಯವರ ಮೌನ ದ್ವೇಷ ತುಂಬಿದ ಧ್ವನಿಗಳಿಗೆ ಧೈರ್ಯ ತುಂಬುತ್ತಿದೆ” ಎಂದು ವಿದ್ಯಾರ್ಥಿಗಳು, ಅಧ್ಯಾಪಕರು ಪತ್ರದಲ್ಲಿ ಹೇಳಿದ್ದಾರೆ. ಬಹಿರಂಗ ಪತ್ರಕ್ಕೆ ಐಐಎಂ-ಅಹಮದಾಬಾದ ಮತ್ತು ಐಐಎಂ-ಬೆಂಗಳೂರಿನ 13 ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸೇರಿದಂತೆ 183 ಮಂದಿ ಸಹಿ ಮಾಡಿದ್ದಾರೆ.

You might also like
Leave a comment