Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Video NewsNational News

ಪರೀಕ್ಷೆಯಲ್ಲಿ ಉತ್ತರದ ಬದಲು ಹಾಡು ಬರೆದ ವಿದ್ಯಾರ್ಥಿ! ವಿಡಿಯೋ ಆಯ್ತು ವೈರಲ್


ಚಾಪ್ರಾ(ಬಿಹಾರ): ಕೆಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಕಲು ಮಾಡಿದರೆ, ಇನ್ನು ಕೆಲವರು ಶಿಕ್ಷಕರನ್ನು ಮೂರ್ಖರನ್ನಾಗಿಸಲು ಉತ್ತರ ಪತ್ರಿಕೆಯ ಮೇಲೆ ಏನೇನೋ ಬರೆಯುತ್ತಾರೆ. ಇತ್ತೀಚೆಗಂತೂ ಬಿಹಾರದಲ್ಲಿ ಇದು ಮಾಮೂಲಾಗಿ ಬಿಟ್ಟಿದೆ.

ಇಂಥದ್ದೇ ಒಂದು ಘಟನೆ ಇದೀಗ ನಡೆದಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಭೋಜ‌ಪುರಿ ಹಾಡುಗಳನ್ನು ಬರೆದಿದ್ದಾರೆ, ಉತ್ತರದ ಬದಲು ಶಿಕ್ಷಕರಿಗೆ ಪತ್ರಗಳನ್ನು ಬರೆದಿದ್ದಾರೆ. ಉತ್ತೀರ್ಣ ಮಾಡಿದರೆ ಲಂಚ ನೀಡುವುದಾಗಿಯೂ ಹೇಳಿದ್ದಾರೆ. ಬಿಹಾರದ ಛಾಪ್ರಾದಲ್ಲಿ ಈ ಘಟನೆ ನಡೆದಿದೆ.

ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವ ಶಿಕ್ಷಕರು ಸಿಟ್ಟಿನಿಂದ ಪತ್ರಿಕೆಗಳ ವಿಡಿಯೋ ರೆಕಾರ್ಡ​ ಮಾಡಿದ್ದಾರೆ. ರಸಾಯನಶಾಸ್ತ್ರದ ಪ್ರಾಯೋಗಿಕ ಪರೀಕ್ಷೆಯಲ್ಲಿ ಭೋಜ‌ಪುರಿ ಹಾಡನ್ನು ಬರೆದ ನಂತರ ವಿದ್ಯಾರ್ಥಿಯನ್ನು ಕರೆದು ಗದರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಾತ್ರವಲ್ಲದೇ ವಿದ್ಯಾರ್ಥಿಗಳ ಪಾಲಕರನ್ನು ಕರೆದು ಎಚ್ಚರಿಕೆ​ ನೀಡಿದ್ದಾರೆ.

ಇದರ ವಿಡಿಯೋ ಭಾರಿ ವೈರಲ್​ ಆಗುತ್ತಿದ್ದು, ಹಲವರು ಇದನ್ನು ನೋಡಿ ನಕ್ಕರೆ ಇನ್ನು ಹಲವರು ಬಿಹಾರದಲ್ಲಿನ ಶಿಕ್ಷಣ ಪದ್ಧತಿಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ.


Leave a Reply