This is the title of the web page

ತೀರ್ಥದ ಜೊತೆಗೆ ಕೃಷ್ಣನ ವಿಗ್ರಹ ನುಂಗಿದ ವ್ಯಕ್ತಿ!

 

ಬೆಳಗಾವಿ: 45 ವರ್ಷದ ವ್ಯಕ್ತಿಯೊಬ್ಬರು ನಿತ್ಯ ಪೂಜೆ ಮಾಡಿ, ದೇವರ ತೀರ್ಥ ಸೇವನೆ ಮಾಡುವ ಅಭ್ಯಾಸವಿತ್ತು. ಎಂದಿನಂತೆ ಪೂಜೆ ನೆರವೇರಿಸಿದ ನಂತರ, ತೀರ್ಥ ಕುಡಿಯುವ ಸಂದರ್ಭದಲ್ಲಿ 50 ಗ್ರಾಂ ತೂಕದ ವಿಗ್ರಹ ನುಂಗಿ ಬಿಟ್ಟಿದ್ದಾರೆ.

ನುಂಗಿದ ವಿಗ್ರಹ ಗಂಟಲಲ್ಲಿ ಸಿಲುಕಿಕೊಂಡಿದೆ. ಆಗ ಗಂಟಲು ನೋವು, ಬಳಿಕ ಊತ ಕಾಣಿಸಿಕೊಂಡಿದೆ. ಕೂಡಲೇ ಕೆ ಎಲ್ ಇ ಆಸ್ಪತ್ರೆಗೆ ತೆರಳಿ, ಪರೀಕ್ಷೆ ನಡೆಸಿದ ವೇಳೆ ಎಂಡೋಸ್ಕೋಪಿಯಲ್ಲಿ ಆತನ ಗಂಟಲಿನಲ್ಲಿ ಕೃಷ್ಣನ ವಿಗ್ರಹ ಸಿಲುಕಿರುವುದು ಕಂಡು ಬಂದಿದೆ.

ವೈದ್ಯರು ಅನ್ನ ನಾಳದಲ್ಲಿ ಸಿಲುಕಿದ್ದ ವಿಗ್ರಹವನ್ನು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿ ಹೊರ ತೆಗೆದಿದ್ದು  ಅವರು ಅಪಾಯದಿಂದ  ಪಾರಾಗಿದ್ದಾರೆ.

You might also like
Leave a comment