This is the title of the web page

ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿ ಶವ ಪತ್ತೆ

ನೆಲಮಂಗಲ, 20- ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು ಬಳಿಯ ಸಿದ್ದಗಂಗ ಮಠದ ಶಾಖಾ ಮಠ ಚಿಲುಮೆ ಮಠದ ಶ್ರೀಗಳ ಮೃತದೇಹವು ಮಠದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶ್ರೀ ಬಸವಲಿಂಗ ಸ್ವಾಮೀಜಿ (59)
1982ರಲ್ಲಿ ಸ್ವಾಮೀಜಿ ಸನ್ಯಾಸ ಸ್ವೀಕರಿಸಿದ್ದರು. ಅವರ ಪೂರ್ವಾಶ್ರಮದ ಹೆಸರು ಬಸವರಾಜ. ಅವರು ಸೋಮವಾರ ಬೆಳಿಗ್ಗೆ ಪೂಜಾಕೈಂಕರ್ಯಗಳನ್ನು ನೆರವೇರಿಸಿದ್ದರು. ನಂತರದಲ್ಲಿ ಮಠದ ಕಿಟಕಿಗೆ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಅವರ ಶವಪತ್ತೆಯಾಗಿದೆ.

ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

You might also like
Leave a comment