This is the title of the web page

8 ಲಕ್ಷ ರೂಪಾಯಿ ಮೌಲ್ಯದ ಟಗರು ‘ಲವ್ಲಿ ಬಾಯ್’ ಹೃದಯಾಘಾತದಿಂದ ಸಾವು

ಬಾಗಲಕೋಟ, 1- ಎಂಟು ಲಕ್ಷ ರೂಪಾಯಿವರೆಗೆ ಮೌಲ್ಯ ಹೊಂದಿದ್ದ “ಲವ್ಲಿ ಬಾಯ್” ಎಂಬ ಹೆಸರಿನ ಟಗರು ಹೃದಯಾಘಾತದಿಂದ ಮೃತಪಟ್ಟಿದೆ.

ಮೂಲತಃ ಬಾಗಲಕೋಟ ತಾಲೂಕಿನ ಸೀಗಿಕೇರಿ ಗ್ರಾಮದ ಎಚ್.ಎನ್. ಸೇಬಣ್ಣವರ ಅವರ ಈ ಟಗರು ಕಾಳಗಕ್ಕೆ ಹೆಸರುವಾಸಿಯಾಗಿತ್ತು. ಹೀಗಾಗಿ ಈ ಟಗರಿಗೆ 8 ಲಕ್ಷ ರೂ.ಗಳ ವರೆಗೆ ಬೇಡಿಕೆ ಇತ್ತು.

ಕಾಳಗದಲ್ಲಿ ಮುನ್ನೂರಕ್ಕೂ ಹೆಚ್ಚು ಟಗರುಗಳನ್ನು ಸೋಲಿಸಿದ್ದ “ಲವ್ಲಿ ಬಾಯ್,” ಚಿನ್ನ, ಬೆಳ್ಳಿ, ನಗದು, ಬೈಕ್, ಹೋರಿ ಸೇರಿ ಹತ್ತು ಲಕ್ಷ ರೂಪಾಯಗಳ ವರೆಗೆ ಬಹುಮಾನ ಗೆದ್ದಿತ್ತು. ಹಿಂದೆ ಈ ಟಗರನ್ನು ಯಾರೋ ಒಬ್ಬರು 8 ಲಕ್ಷ ರೂಪಾಯಿಗೆ ಕೇಳಿದ್ದರು. ಆದರೆ ಟಗರಿನ ಮಾಲೀಕ ಶೇಬಣ್ಣವರ ಅವರು ತಮ್ಮ ಲಕ್ಕಿ ಟಗರನ್ನು ಮಾರಾಟ ಮಾಡಿರಲಿಲ್ಲ.

ಮೃತ ಆರು ವರ್ಷದ “ಲವ್ಲಿ ಬಾಯ್” ದೇಹದ ಮೇಲೆ ಹೂ ಮಾಲೆ, ದೇಹದ ಭಾಗಕ್ಕೆ ಭಂಡಾರ ಬಳಿದು ಪ್ರಶಸ್ತಿಗಳನ್ನು ಟಗರಿನ ಪಾರ್ಥಿವ ಶರೀರದ ಮುಂದೆ ಇಟ್ಟು ಗ್ರಾಮದಲ್ಲಿ ಶ್ರದ್ಧಾಂಜಲಿಗೆ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನ ಪಡೆಯಲು ಸುತ್ತಮುತ್ತಲ ಗ್ರಾಮಗಳ ಜನರು ಬಂದು ಟಗರಿಗೆ ಅಂತಿಮ ವಿದಾಯ ಹೇಳುತ್ತಿದ್ದಾರೆ.

You might also like
Leave a comment