This is the title of the web page

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯನ್ನು ಓಡಿಸಿಕೊಂಡು ಹೋಗಿ ಮದುವೆಯಾಗಿದ್ದ ಶಿಕ್ಷಕಿ ಬಂಧನ

ಚೆನ್ನೈ, ೨೬- ಮಕ್ಕಳಿಗೆ ಬದುಕಿನ ದಾರಿ ತೋರಿಸಬೇಕಿದ್ದ ಶಿಕ್ಷಕಿಯೊಬ್ಬಳು ತಮ್ಮ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯನ್ನು ಓಡಿಸಿಕೊಂಡು ಹೋಗಿ ಮದುವೆಯಾಗಿ ಈಗ ಜೈಲು ಸೇರಿದ್ದಾಳೆ.

ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಮಾಡುತ್ತಿದ್ದ ಶರ್ಮಿಲಾ ಎಂಬಾಕೆ 11ನೇ ತರಗತಿ ಓದುತ್ತಿದ್ದ 17 ವರ್ಷದ ಬಾಲಕನನ್ನು ಪ್ರೀತಿಸಿ ತಂಜಾವುರಿಗೆ ಕರೆದೊಯ್ದು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದರು.

ಮಾರ್ಚ​ 5ರಂದು ಕಾಲೇಜಿಗೆ ಹೋದ ವಿದ್ಯಾರ್ಥಿ ಮನೆಗೆ ವಾಪಸ್ ಬಂದಿರಲಿಲ್ಲ. ಮಗನಿಗಾಗಿ ಹಲವೆಡೆ ಹುಡುಕಾಡಿದ ಪಾಲಕರು ನಂತರ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಲು ಶಾಲೆಗೆ ಬಂದಾಗ, ಮಾ.5ರಿಂದ ಅಂದರೆ ಹುಡುಗ ನಾಪತ್ತೆಯಾದ ದಿನದಿಂದಲೇ ಶಿಕ್ಷಕಿ ಶರ್ಮಿಳಾ ಸಹ ಶಾಲೆಗೆ ಬರುತ್ತಿಲ್ಲ ಎಂಬುದು ಗೊತ್ತಾಯಿತು.

ಪೊಲೀಸರು ಶಿಕ್ಷಕಿ ಶರ್ಮಿಳಾ ಬಗ್ಗೆ ಬಾಲಕನ ಮನೆಯಲ್ಲಿ ಮಾಹಿತಿ ಕೇಳಿದರು. ಆಗ ಶಿಕ್ಷಕಿ ಜೊತೆ ಬಾಲಕ ಮನೆಯಲ್ಲಿ ಗಂಟೆಗಟ್ಟಲೇ ಫೋನ್​ನಲ್ಲಿ ಮಾತಾಡುತ್ತಿದ್ದ ಎಂಬ ಮಾಹಿತಿಯನ್ನು ಪಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಇವರ ಹುಡುಕಾಟ ಪ್ರಾರಂಭಿಸಿದಾಗ ಇಬ್ಬರೂ ತಮ್ಮ ಮೊಬೈಲ್​ ಕೂಡ ಬಂದ್​ ಮಾಡಿರುವದು ಗೊತ್ತಾಗಿತ್ತು. ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿ ಶಿಕ್ಷಕಿಯ ಸಂಬಂಧಿ, ಸ್ನೇಹಿತರ ಮನೆಗಳನ್ನೂ ಹುಡುಕಾಡಿದರು, ಆದರೂ ಅವರ ಸುಳಿವು ಸಿಗಲಿಲ್ಲ.

ವಿದ್ಯಾರ್ಥಿಯನ್ನು ತಂಜಾವೂರಿಗೆ ಕರೆದೊಯ್ದಿದ್ದ ಶಿಕ್ಷಕಿ ಕೆಲದಿನ ಅಲ್ಲಿದ್ದಳು. ತಂಜಾವೂರಿನ ದೇವಸ್ಥಾನದಲ್ಲೇ ಬಾಲಕನೊಂದಿಗೆ ಮದುವೆಯಾಗಿ ಸ್ನೇಹಿತೆಯ ಮನೆಯಲ್ಲಿ ತಂಗಿದ್ದಳು. ನಂತರ ತಿರುಚಿಗೆ ಬಂದು ಅಲ್ಲಿ ಇಬ್ಬರೂ ಒಂದು ಮನೆಯಲ್ಲಿದ್ದರು. ಆದರೆ ತನ್ನ ಹಳೆಯ ಸಿಮ್​ ತೆಗೆದು ಹೊಸ ಸಿಮ್​ ಹಾಕಿ ಮೊಬೈಲ್​ ಆನ್​ ಮಾಡಿದ ನಂತರ ಪೊಲೀಸರಿಗೆ ಶಿಕ್ಷಕಿ ಎಲ್ಲಿದ್ದಾಳೆ ಎಂಬ ಸುಳಿವು ಸಿಕ್ಕಿತು. ಮಾ.24ರಂದು ಪೊಲೀಸರು ಶಿಕ್ಷಕಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಬಾಲಕನನ್ನು ಈಗ ಬಾಲಮಂದಿರಕ್ಕೆ ಕಳುಹಿಸಲಾಗಿದೆ.

You might also like
Leave a comment