This is the title of the web page

ಹಿಜಾಬ್ ಧರಿಸಿ ಕ್ಲಾಸ್ ಗೆ ಬಂದ ಶಿಕ್ಷಕಿ, ವಿದ್ಯಾರ್ಥಿನಿಯರು

ವಿಜಯಪುರ, 15- ವಿಜಯಪುರ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ಬುರ್ಖಾ ಹಾಗು ಹಿಜಾಬ್ ಧರಿಸಿಯೇ ಮಂಗಳವಾರ ಶಾಲೆಗೆ ಆಗಮಿಸಿದರು.

ಮೊದಲಿನಂತೆಯೇ ಬುರ್ಖಾ, ಹಿಜಾಬ್ ಧರಿಸಿಯೇ ಪ್ರಾರ್ಥನೆಯಲ್ಲಿ ಶಿಕ್ಷಕಿಯರು, ವಿದ್ಯಾರ್ಥಿನಿಯರು ಭಾಗಿಯಾಗಿದ್ದರಲ್ಲದೇ ಕೆಲ ವಿದ್ಯಾರ್ಥಿಗಳು ನಮಾಜ್ ಮಾಡುವಾಗ ಧರಿಸುವ ಟೋಪಿ ಸಹ ಧರಿಸಿ ಬಂದಿದ್ದರು.

ಆರಂಭದ ಪ್ರಾರ್ಥನೆ ಮುಗಿದ ನಂತರ ಬುರ್ಖಾ, ಹಿಜಾಬ್‍ ಧರಿಸಿಯೇ ಶಿಕ್ಷಕಿಯರು ವಿದ್ಯಾರ್ಥಿನಿಯರು ತರಗತಿಗೆ ತೆರಳಿದರು. “ಹಿಜಾಬ್ ಧರಿಸಿ ಬರಬಾರದು ಎಂದು ಆದೇಶ ಬಂದಿಲ್ಲ, ನಮಗೆ ಯಾರೂ ಆರ್ಡರ್ ಕೊಟ್ಟಿಲ್ಲ,” ಎಂದು ಶಾಲೆಯ ಶಿಕ್ಷಕರೊಬ್ಬರ ಹೇಳಿದರು.

ವಿಷಯ ತಿಳಿದು ಶಾಲೆಗೆ ಆಗಮಿಸಿದ್ದ ವಿಜಯಪುರ ನಗರ ಬಿಇಓ ಎಂ.ಬಿ.ಮೊರಟಗಿ ಅವರು, ತರಗತಿಗಳಿಗೆ ಭೇಟಿ ನೀಡಿದರು. “ಇಲ್ಲಿನ ಪರಸ್ಥಿತಿ ವೀಕ್ಷಣೆ ಮಾಡಿದ್ದೇನೆ. ಡಿಡಿಪಿಐ ಅವರಿಗೆ ವರದಿ ನೀಡುತ್ತೇನೆ” ಎಂದು ಅವರು ಹೇಳಿದರು.

You might also like
Leave a comment