This is the title of the web page

ಸ್ಕೂಲ್ ಮಕ್ಕಳ ಪಿಕ್ನಿಕ್ ಗೆ ಹೊರಟಿದ್ದ ಟೆಂಪೋ ಪಲ್ಟಿ, ಕ್ಲೀನರ್ ಸಾವು, 15 ಮಕ್ಕಳಿಗೆ ಗಾಯ

ವಿಜಯಪುರ : ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಪಿಕ್ನಿಕ ಗೆಂದು ಆಲಮಟ್ಟಿ ಜಲಾಶಯಕ್ಕೆ ತೆರಳಿದ್ದ ಟೆಂಪೋ ಟ್ರಾವೆಲ್ಲೆರ್ ಬಸ್ ಪಲ್ಟಿಯಾಗಿ ಸಂಭವಿಸಿರುವ

ದುರ್ಘಟನೆಯಲ್ಲಿ ವಾಹನದ ಕ್ಲೀನರ್ ಅಸುನಿಗಿ, 15 ವಿದ್ಯಾರ್ಥಿ ಗಳು ಗಾಯಗೊಂಡಿರುವ ಘಟನೆ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕೂಚಬಾಳ-ಬಾವೂರ ಮಧ್ಯೆ ನಡೆದಿದೆ‌. ಘಟನೆಯಲ್ಲಿ ಟ್ರಾವೆಲ್ಸ್ ಕ್ಲೀನರ್ ದಾವಲಸಾಬ ಸಾಲವಾಡಗಿ (40) ಸಾವನ್ನಪ್ಪಿದ್ದಾರೆ.

ಟ್ರಾವೆಲ್ಲೆರ್ಸ್, ತಾಳಿಕೋಟಿ ತಾಲೂಕಿನ ಚೊಕಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿತ್ತು.

ಅಪಘಾತದಲ್ಲಿ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದು ಅವರಿಗೆ ತಾಳಿಕೋಟಿ ಸರ್ಕಾರಿ ಆಸ್ಪತ್ರೆ ಹಾಗು ತಮದಡ್ಡಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌.

ಶಿಕ್ಷಣ ಇಲಾಖೆ ಅನುಮತಿ ಇಲ್ಲದೇ ಪ್ರವಾಸಕ್ಕೆ ಹೊರಟಿದ್ದರು ಎನ್ನಲಾಗಿದೆ. ತಾಳಿಕೊಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

You might also like
Leave a comment