This is the title of the web page

ಮಹಾರಾಷ್ಟ್ರ ಸರ್ಕಾರದ ಬಿರುಕಿನ ನಡುವೆ ಠಾಕ್ರೆಗೆ ಕೊರೊನಾ ಪಾಸಿಟಿವ್ 

 

 

ಹೊಸದಿಲ್ಲಿ: ಮಹಾರಾಷ್ಟ್ರ ರಾಜಕೀಯ ತೀವ್ರಗೊಂಡು, ಬಿರುಕಿನ ಮೂಡಿದೆ. ಮಹಾ ಸರ್ಕಾರ ಪಥನದ ಹಂತಕ್ಕೆ ಬಂದು ನಿಂತಿದೆ. ಈ ವೇಳೆಯಲ್ಲಿಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆಗೆ ಕೋವಿಡ್ ಪಾಸಿಟಿವ್ ಪರೀಕ್ಷೆಯಿಂದ ದೃಢಪಟ್ಟಿದೆ ಎನ್ನಲಾಗಿದೆ.

ಈ ಕುರಿತಂತೆ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ವೀಕ್ಷಕ ಕಮಲ ನಾಥ್ ಮಾಹಿತಿ ನೀಡಿದ್ದು, ಉದ್ಧವ ಠಾಕ್ರೆ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಉದ್ಧವ ಠಾಕ್ರೆ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಕ್ಯಾಬಿನೆಟ್ ಸಭೆ ನಡೆಸಬೇಕಿತ್ತು. ಇಂದು ಎನ್ ಸಿಪಿ ಮುಖ್ಯಸ್ಥ ಶರದ ಪವಾರ ಅವರನ್ನು ಭೇಟಿಯಾಗಲಿದ್ದರು. ಈ ವೇಳೆಯಲ್ಲಿಯೇ ಅವರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

You might also like
Leave a comment