This is the title of the web page

ಕಾಳಿಚರಣ ಮಹಾರಾಜ ಬಂಧನ

ಭೋಪಾಲ, 30- ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ, ರಾಷ್ಟ್ರಪಿತನನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ರಾಯಪುರ ಪೊಲೀಸರು ಮಹಾರಾಷ್ಟ್ರದ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ ಮಹಾರಾಜ ಅವರನ್ನು ಬಂಧಿಸಿದ್ದಾರೆ. ಅವರನ್ನು ಖಜುರಾಹೊದಲ್ಲಿ ಬಂಧಿಸಲಾಯಿತು.

ಕಾಳಿಚರಣ ಮಹಾರಾಜ ಮಧ್ಯಪ್ರದೇಶದ ಖಜುರಾಹೊದಿಂದ 25 ಕಿ.ಮೀ ದೂರದ ಬಾಗೇಶ್ವರ ಧಾಮ್ ಬಳಿ ಬಾಡಿಗೆ ವಸತಿಗೃಹದಲ್ಲಿ ತಂಗಿದ್ದರು. ರಾಯ‌ಪುರ ಪೊಲೀಸರು ಗುರುವಾರ ಬೆಳಗಿನ 4 ಗಂಟೆಗೆ ಬಂಧಿಸಿದ್ದಾರೆ.

ಸಂಜೆ ವೇಳೆಗೆ ಪೊಲೀಸ್ ತಂಡವು ಆರೋಪಿಗಳೊಂದಿಗೆ ರಾಯ್‌ಪುರ ತಲುಪಲಿದೆ ಎಂದು  ರಾಯಪುರದ ಎಸ್ ಪಿ  ಪ್ರಶಾಂತ ಅಗರವಾಲ ಹೇಳಿದ್ದಾರೆ.

ರಾಯ‌ಪುರದ ಮಾಜಿ ಮೇಯರ್ ಪ್ರಮೋದ ದುಬೆ ಅವರ ದೂರಿನ ಮೇರೆಗೆ ರಾಯಪುರದ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಕಾಳಿಚರಣ ಮಹಾರಾಜ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ಛತ್ತೀಸ‌ಗಡದ ರಾಯಪುರದಲ್ಲಿ ನಡೆದ ಧರ್ಮ ಸಂಸದ ಅಥವಾ ಧಾರ್ಮಿಕ ಸಭೆಯಲ್ಲಿ ಕಾಳೀಚರಣ ಮಹಾರಾಜ ವಿವಾದಾತ್ಮಕ ಭಾಷಣ ಮಾಡುತ್ತಿದ್ದಾಗ ಸಭೆಯ ಮುಖ್ಯ ಆಯೋಜಕರಾದ ಮಹಂತ ರಾಮಸುಂದರ ದಾಸ್ ಅವರು ಕೋಪದಿಂದ ವೇದಿಕೆಯಿಂದ ಹೊರನಡೆದಿದ್ದರು. ಅವರ ವಿರುದ್ಧ ಪ್ರಕರಣ ದಾಖಲಿಸಿದ ದಿನದಿಂದಲೂ ಪೊಲೀಸರು ಹುಡುಕುತ್ತಿದ್ದರು.

 

 

You might also like
Leave a comment