ಮೂಡಲಗಿ : ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದ ರಾಮ ಮಂದಿರ ಮಠದ ಲೋಕೇಶ್ವರ ಸ್ವಾಮಿಯನ್ನು ಮೂಡಲಗಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮಠದ ಭಕ್ತರೊಬ್ಬರ ಮಗಳನ್ನು ಬೆಳಗಾವಿ ಮತ್ತು ಬಾಗಲಕೋಟನ ಲಾಡ್ಜಗಳಿಗೆ ಕರೆದುಕೊಂಡು ಹೋಗಿ ಲೋಕೇಶ್ವರ ಸ್ವಾಮಿ ಹಲವು ಬಾರೀ ಅತ್ಯಾಚಾರವೆಸಗಿದ್ದಾರೆ.
ಬಾಲಕಿಗೆ ಸ್ವಲ್ಪ ಹಣ ನೀಡಿ ಮನೆಗೆ ಹೋಗಲು ಸೂಚಿಸಿ ಮಾಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟಿದ್ದ. ಬಾಲಕಿಯ ಪಾಲಕರು ಈ ಬಗ್ಗೆ ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮಠ ಪರಿಶೀಲಿಸಿದ ಪೊಲೀಸರು ಅಲ್ಲಿ ಕೆಲವು ಶಸ್ತ್ರಾಸ್ತ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.