This is the title of the web page

ಹಿಜಾಬ್ ಬೆಂಬಲಕ್ಕೆ ಬಂತು ನೀಲಿ ಶಾಲು

ಚಿಕ್ಕಮಗಳೂರು, 7- ಐಡಿಎಸ್‌ಜಿ ಕಾಲೇಜಿನಲ್ಲಿ ಈಗ ನೀಲಿ ಶಾಲು ಪ್ರತ್ಯಕ್ಷವಾಗಿದ್ದು, ಹಿಜಾಬ್ ತೆಗೆಸಬಾರದೆಂದು ನೀಲಿ ಶಾಲು ಧರಿಸಿ ವಿದ್ಯಾರ್ಥಿಗಳು ಮುಸ್ಲಿಮ ವಿದ್ಯಾರ್ಥಿನಿಯರ ಪರ ಪ್ರತಿಭಟನೆ ನಡೆಸಿದ್ದಾರೆ.

ಹಿಜಾಬ್ ಆಯ್ತು, ಕೇಸರಿ ಶಾಲು ಆಯ್ತು ಇದೀಗ ನೀಲಿ ಶಾಲು ಬಂದಿದ್ದು ದಲಿತ ವಿದ್ಯಾರ್ಥಿಗಳು ಮುಸ್ಲಿಮ ವಿದ್ಯಾರ್ಥಿಗಳ ಪರ ನೀಲಿ ಶಾಲು ಧರಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

ಜೈ ಭೀಮ್ ಘೋಷಣೆ ಕೂಗುತ್ತಾ ದಲಿತ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಇದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳಿಂದ ಜೈ ಶ್ರೀರಾಮ್ ಘೋಷಣೆ ಕೂಗಿದರು. ಇದರಿಂದ ಕಾಲೇಜಿನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

You might also like
Leave a comment