This is the title of the web page

ಮುಖ್ಯಮಂತ್ರಿ ಬೂಟ್ ಪಾಲಿಶ್ ಮಾಡಲು ಬೆಳಗಾವಿಗೆ ಬಂದರು

ಬೆಳಗಾವಿ, 16- ತಮ್ಮ ಜಿಲ್ಲೆಗೆ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಲು ಆಗ್ರಹಿಸಿ ಬಾಗಲಕೋಟ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೂಟ್ ಪಾಲಿಶ್ ಮಾಡಲು ಬೆಳಗಾವಿಗೆ ಆಗಮಿಸಿದಾಗ ಪೊಲೀಸರಿಂದ ತಡೆಯಲ್ಪಟ್ಟಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮುಖ್ಯಮಂತ್ರಿ ತಂಗಿದ್ದು ಅಲ್ಲಿಗೆ ಆಗಮಿಸಿದ್ದ ಕಾರ್ಯಕರ್ತರನ್ನು ಮುಖ್ಯ ಪ್ರವೇಶ ದ್ವಾರದ ಬಳಿ ಪೊಲೀಸರು ತಡೆದರು. ಬಂದ ಉದ್ದೇಶ ಕೇಳಿ ಆಶ್ಚರ್ಯಚಕಿತರಾದ ಪೊಲೀಸರು ಕಪ್ಪು ಬಣ್ಣದ ಪಾಲಿಷ್ ಬಾಕ್ಸ್ ಹಾಗು ಬ್ರಷ್ ಮೊದಲು ವಶಪಡಿಸಿಕೊಂಡರು.

“ಬೂಟ್ ಪಾಲಿಶ್ ಮಾಡಿಸಿಕೊಂಡರಾದರೂ ಅರ್ಥ ಮಾಡಿಕೊಂಡು ಮೆಡಿಕಲ್ ಕಾಲೇಜು ಮಾಡಬಹುದೆಂದು ಭಾವಿಸಿ ಬಂದಿದ್ದೇವೆ. ಅವಕಾಶ ಕೊಡಿ”, ಎಂದು ಪೊಲೀಸರಲ್ಲಿ ಅವರು ವಿನಂತಿಸಿದರು.

ಬಾಗಲಕೋಟದಲ್ಲಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಕರವೇ ಬಹು ದೊಡ್ಡ ಬೂಟ್ ಪಾಲಿಷ್ ಚಳುವಳಿಯನ್ನೇ ಹಮ್ಮಿಕೊಂಡಿದ್ದು, ಈಗ ಬೊಮ್ಮಾಯಿ ಅವರ ಬೂಟ್ ಪಾಲಿಷ್ ಮಾಡಿ ಬಾಗಲಕೋಟದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸುವಂತೆ ಒತ್ತಾಯಿಸಲು ಆಗಮಿಸಿದ್ದಾರೆ.

ಕರವೇ ಕಾರ್ಯಕರ್ತರ ಗದ್ದಲ ಹಿನ್ನೆಲೆ ವಿಟಿಯು ಗೇಟ್ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

You might also like
Leave a comment